ಕಾರ್ಕಳ: ದಿಲೀಪ್ (34), ಆರೂರು ಗ್ರಾಮ ಬ್ರಹ್ಮಾವರ ನಿವಾಸಿ ಯಾಗಿದ್ದು
ತನ್ನ ಬೈಕ್ ನಲ್ಲಿ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ನಲ್ಲೂರು ಗ್ರಾಮದ ಪಾಜೆಗುಡ್ಡೆ ಎಂಬಲ್ಲಿ ತಲುಪುವಾಗ ಕಾರ್ಕಳದ ಕಡೆಯಿಂದ ಧರ್ಮಸ್ಥಳ ಹೋಗುವ ರಾಜ್ಯ ಹೆದ್ದಾರಿಯಲ್ಲಿ KA-19-MK-6162 ನಂಬರ್ ನ ಕಾರೊಂದು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಓವರ್‌ಟೇಕ್ ಮಾಡುತ್ತಾ ರಸ್ತೆಯ ಬಲ ಭಾಗಕ್ಕೆ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಿಲೀಪ್ ವರು ಬೈಕ್ ನೊಂದಿಗೆ ರಸ್ತೆಗೆ ಬಿದ್ದು,ಹಣೆಯ ಬಲ ಬದಿ ಬಲಕೈ ತೋರು ಬೆರಳಿಗೆ ಮತ್ತು ಬಲಕಾಲಿನ ಪಾದಕ್ಕೆ ಗಾಯವಾಗಿದ್ದು ಬೈಕ್ ಜಖಂಗೊಂಡಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
previous post
next post