ಮೂಡುಬಿದಿರೆ ತಾಲೂಕಿನ ವಿವಿಧ ಭಾಗಗಳಲ್ಲಿ ಬೀಸಿದ ಭೀಕರ ಗಾಳಿಗೆ ಹಲವಾರು ಮರ ಧರೆಗುರುಳಿದೆ. ಮಳೆ ಕೂಡ ಭಾರೀ ಪ್ರಮಾಣದಲ್ಲಿ ಹರಿದಿದೆ. ಹಲವಾರು ಮರಗಳು ಮನೆ, ವಿದ್ಯುತ್ ತಂತಿ ಕಂಬ ಗಳ ಮೇಲೆ ಉರುಳಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಲ್ಲಿ ಹಾನಿ ಉಂಟಾಗಿದೆ.
ಫ್ಲೆಕ್ಸ್ ಫ್ರೇಮ್ ಕೂಡ ನೆಲಕ್ಕೂರುಳಿದೆ. ಬಸ್ ನಿಲ್ದಾಣದಲ್ಲಿ ದ್ವಿ ಚಕ್ರ ವಾಹನ ಸವಾರ ಸ್ವಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮಳೆಗಾಲದ ಈ ಸಂದರ್ಭದಲ್ಲಿ ಫ್ಲೆಕ್ ಗಳು ಅಪಾಯಕಾರಿಯಾಗಿ ಕಾಡುತ್ತಿದೆ. ಗಾಳಿಯ ತೀವ್ರತೆಗೆ ರಸ್ತೆ ಬದಿ ಹಾಕಲಾದ ಹೊರ್ಡಿಂಗ್, ಫ್ಲೆಕ್ಸ್ ಹರಿದು ಹೋಗಿದೆ. ಗಾಳಿ ಬಲವಾಗಿ ಬೀಸುವ ಕಾರಣಕ್ಕೆ ಸವಾರರು ಜಾಗ್ರತೆ ವಹಿಸಬೇಕಾಗಿದೆ.
ಬೋರುಗುಡ್ಡೆ ಬೀಜದ ಕಾರ್ಖಾನೆ ಮಾಡು ಹಾರಿ ಹೋಗಿದೆ. ಮನೆಯ ಮಾಡು ಕೂಡ ಹಾರಿ ಹೋಗಿ ಅಪಾಯ ಸಂಭವಿಸಿದೆ.