ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.)ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಪಳ್ಳಿ ಘಟಕ ಹಾಗೂ ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಸಮಿತಿ ಪಳ್ಳಿ ಇದರ ಜಂಟಿ ಆಶ್ರಯದಲ್ಲಿ ಭಾರತ ರತ್ನ ಡಾ.ಬಿ.ಆರ್ .ಅಂಬೇಡ್ಕರ್ ರವರ ಜಯಂತಿಯನ್ನು ಪಳ್ಳಿ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಆಚರಿಸಲಾಯಿತು..
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಶೇಖರ್ ಕೌಡೂರು, ಕಾರ್ಕಳ ತಾಲೂಕು ಅಧ್ಯಕ್ಷರಾದ ಹರೀಶ್ ಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಪಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿ ರಂಗನಪಲ್ಕೆ, ದೈವಸ್ಥಾನ ಸಮಿತಿ ಅಧ್ಯಕ್ಷರಾದ ಕ್ರಷ್ಣ ಪಳ್ಳಿ, ಕಾರ್ಯದರ್ಶಿ ಅಶ್ವಥ್ ಪಳ್ಳಿ,, ಮಹಿಳಾ ಅಧ್ಯಕ್ಷೆ ಗಿರಿಜಾ, ಆದಿ ದ್ರಾವಿಡ ಗ್ರಾಮ ಸಮಿತಿ ಅಧ್ಯಕ್ಷರಾದ ಜಯಂತ್ ಪಳ್ಳಿ, ಕಾರ್ಯದರ್ಶಿ ಅರುಣ್ ಪಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿ ಸುದರ್ಶನ್ ಪಳ್ಳಿ, ಹಾಗೂ ಪಳ್ಳಿ ಶ್ರೀ ಸತ್ಯ ಸಾರಮಾನಿ ದೈವಸ್ಥಾನದ ಸರ್ವ ಸದಸ್ಯರು ಹಾಜರಿದ್ದರು.