ಕಾರ್ಕಳಹೆಬ್ರಿ

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

ಮುದ್ರಾಡಿ: ನಿರ್ಗತಿಕರಾಗಿ ಅನಾರೋಗ್ಯ ಬಳಲುತ್ತಿರುವ ಮುದ್ರಾಡಿ ಉಪ್ಪಳದ ಅಣ್ಣಯ್ಯ ನಾಯ್ಕ್ ಮತ್ತು ಯಶೋಧಾ ನಾಯ್ಕ್ ದಂಪತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿರ್ಮಿಸಿದ “ವಾತ್ಸಲ್ಯ ” ಮನೆಯ ಪ್ರವೇಶ ಮತ್ತು ಹಸ್ತಾಂತರ ಸೋಮವಾರ ಗೋದೋಳಿ ಲಗ್ನದಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮುದ್ರಾಡಿ ಗ್ರಾಮ ಪಂಚಾಯಿತಿ, ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿಸಿಟಿ ಹಾಗೂ ವಿವಿಧ ದಾನಿಗಳ ನೆರವು ಸಹಕಾರದೊಂದಿಗೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.

 

ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ ತುಳಸಿಕಟ್ಟೆಯಲ್ಲಿ ದೇವರಿಗೆ ದೀಪ ಬೆಳಗಿದರು. ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾಕಾಂತಿ, ಸಂಘಸಂಸ್ಥೆಗಳ ಪ್ರಮುಖರಾದ ಜ್ಯೋತಿ, ಮಮತಾ, ಸೇರಿದಂತೆ ಮಹಿಳೆಯರು ದೇವರ ಪೋಟೊ, ದೀಪ, ಹಾಲು ನೀರು, ಪ್ರಸಾದದೊಂದಿಗೆ ಮನೆಯನ್ನು ಪ್ರವೇಶಿಸಿ ಮನೆಯೊಳಗೆ ದೀಪ ಬೆಳಗಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಉದ್ಘಾಟಿಸಿ ಮನೆಯನ್ನು ಹಸ್ತಾಂತರಿಸಿ ಮನೆ ನಿರ್ಮಿಸಿ ಬಡಕುಟುಂಬದ ಕಣ್ಣೀರು ಒರೆಸಿದ ಪುಣ್ಯದ ಕಾರ್ಯವನ್ನು ಪ್ರಶಂಸಿದರು.

ಮನೆ ನಿರ್ಮಾಣದ ನೇತ್ರತ್ವ ವಹಿಸಿದ ಮೇಲ್ವೀಚಾರಕ ಉಮೇಶ್ ಬಿಕೆ, ಮನೆ ನಿರ್ಮಾಣ ಮತ್ತು ಸಹಕಾರದ ಸಮಗ್ರ ವಿವರ ನೀಡಿ ಕೃತಜ್ಞತೆ ಸಲ್ಲಿಸಿದರು. ಸಹಕಾರ ನೀಡಿದ ಹಲವರನ್ನು ಮುದ್ದು ಪೂಜಾರಿ ಸಹಿತ ಹಲವರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ನಿರ್ಗತಿಕರಿಗೆ ಧರ್ಮಸ್ಥಳ ಯೋಜನೆಯ ಮೂಲಕ ನಿರಂತರವಾಗಿ ನೀಡುತ್ತಿರುವ ಸೇವಾ ಸೌಲಭ್ಯಗಳನ್ನು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಅಧ್ಯಕ್ಷ ವಾದಿರಾಜ ಶೆಟ್ಟಿ, ವಲಯಾಧ್ಯಕ್ಷರಾದ ಯೋಗೀಶ್, ಜ್ಯೋತಿ, ಅಲಯನ್ಸ್ ಕ್ಲಬ್ ಹೆಬ್ರಿ ರಾಮಚಂದ್ರ ಭಟ್, ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ, ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿಸಿಟಿ ಅಧ್ಯಕ್ಷೆ ಸುನೀತಾ ಹೆಬ್ಬಾರ್, ಮುದ್ರಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾಕಾಂತಿ, ಪಿಡಿಒ ಸುಭಾಸ್ ಖಾರ್ವಿ, ಸದಸ್ಯರಾದ ಗಣಪತಿ ಮುದ್ರಾಡಿ, ಸಂತೋಷ ಶೆಟ್ಟಿ ಉಪ್ಪಳ, ಸನತ್ ಕುಮಾರ್, ವಿವಿಧ ಪ್ರಮುಖರಾದ ಬಲ್ಲಾಡಿ ಚಂದ್ರಶೇಖರ ಭಟ್, ಅಶೋಕ್ ಕುಮಾರ್ ಶೆಟ್ಟಿ, ಎಳ್ಳಾರ ದೇವೇಂದ್ರ ಕಾಮತ್, ಸುಕೇಶ ಹೆಗ್ಡೆ ಕಡ್ತಲ, ಸುಧಾಕರ ಶೆಟ್ಟಿ, ಸಂತೋಷ ಪೂಜಾರಿ, ಸೇವಾಪ್ರತಿನಿಧಿ ಸುಜಯಾ, ಮಮತಾ, ಸುಕುಮಾರ್ ಪೂಜಾರಿ, ರತ್ನಾಕರ ಪೂಜಾರಿ, ಸುರೇಶ್, ಶ್ರೀನಿವಾಸ ಶೆಟ್ಟಿಗಾರ್, ಸುರೇಶ ಪೂಜಾರಿ ಸೇರಿದಂತೆ ಹಲವರು ಭಾಗಿಯಾದರು. ಉಮೇಶ್ ಬಿಕೆ ಸ್ವಾಗತಿಸಿ, ನಿರೂಪಿಸಿದರು.

Related posts

ಪ್ರಬಲ ಇಚ್ಛಾಶಕ್ತಿ ಹಾಗೂ ಕಠಿಣ ಪರಿಶ್ರಮ ಸಾಧನೆಯ ಸೂತ್ರಗಳು: ಎಚ್. ನಾಗರಾಜ್ ಶೆಟ್ಟಿ

Madhyama Bimba

ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ ಅವರಿಗೆ ಸೇವಾ ರತ್ನ ಪ್ರಶಸ್ತಿ

Madhyama Bimba

ಸೂರಿಮಣ್ಣು: ಭಜನಾ ಮಂಗಲೋತ್ಸವಕ್ಕೆ ಸುವರ್ಣ ಸಂಭ್ರಮ : ಋಕ್ ಸಂಹಿತಾ ಮಹಾಯಾಗ -7 ದಿನ ಭಜನೋತ್ಸವ:

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More