ಕಾರ್ಕಳಹೆಬ್ರಿ

ರಾಜಾಪುರ ಸಾರಸ್ವತ ಸೊಸೈಟಿ ಲಿ.: ನವೀಕೃತ ಹವಾನಿಯಂತ್ರಿತ ಬೆಳ್ಮಣ್ ಶಾಖೆ ಉದ್ಘಾಟನೆ

ಕಾರ್ಕಳದ ಬೆಳ್ಮಣ್‌ನಲ್ಲಿರುವ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನವೀಕೃತ ಹವಾನಿಯಂತ್ರಿತ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಜೂ. 17 ರಂದು ಜರಗಿತು.

ಕಟ್ಟಡದ ಮಾಲೀಕರಾದ ರಮಾನಾಥ ಶೆಣ್ಯೆ ಜ್ಯೋತಿ ಪ್ರಜ್ವಲಿಸಿ ಶಾಖೆಯನ್ನು ಉದ್ಘಾಟಿಸಿದರು.


ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಕಡಾರಿ ರವೀಂದ್ರ ಪ್ರಭು ರವರು ” ಸೊಸೈಟಿಯ ಅಭಿವೃದ್ಧಿ ಗೆ ಸಹಕರಿಸಿದ ಗ್ರಾಹಕರನ್ನು ಸ್ಮರಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಬೆಳ್ಮಣ್ ಶಾಖೆಯು ಹೆಚ್ಚಿನ ಪ್ರಗತಿಯನ್ನು ಕಂಡಿದೆ. ಇದಕ್ಕೆ ಈ ಭಾಗದ ಗ್ರಾಹಕರು ಶಾಖೆಯ ಸಲಹಾ ಸಮಿತಿಯ ಸದಸ್ಯರು ಮತ್ತು ಸಿಬ್ಬಂದಿಗಳೇ ಕಾರಣ ಎಂದು ಹೇಳಿದರು” .

೨೦೧೩ರಲ್ಲಿ ಉಮಾನಾಥ ಶೆಣ್ಯೆ ರವರ ಮಾಲಕತ್ವದ ಲಕ್ಷ್ಮಿ ಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭವಾದ ಬೆಳ್ಮಣ್ ಶಾಖೆಯು ಸಹಕಾರ ರತ್ನ ಡಾ. ರಾಜೇಂದ್ರ ಕುಮಾರ್ ರವರಿಂದ ಉದ್ಘಾಟನೆಗೊಂಡು ತದನಂತರ ಸುಂದರ್ ಶೆಣೈ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಸತತ ಗ್ರಾಹಕರಿಗೆ ಸೇವೆಯನ್ನು ನೀಡುತ್ತ ಬಂದಿರುತ್ತದೆ.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನೀರೆ ರವೀಂದ್ರ ನಾಯಕ್, ಬೆಳ್ಮಣ್ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಪಾಟ್ಕರ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ನಾಯಕ್, ನಿರ್ದೇಶಕರಾದ ಹರೀಶ್ ನಾಯಕ್ ಅಜೆಕಾರು, ಹರಿಶ್ಚಂದ್ರ ತೆಂಡೂಲ್ಕರ್ ಮಾಳ, ಸಚ್ಚಿದಾನಂದ ಪ್ರಭು ಕಣಜಾರು, ಸುನಿಲ್ ನಾಯಕ್ ಮಟ್ಟಾರು, ಹರೀಶ್ ಬಿ ನಾಯಕ್ ಪಳ್ಳಿ , ದೇವೇಂದ್ರ ಕಾಮತ್ ಎಳ್ಳಾರೆ, ಶಾಖಾ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆ: ಶಶಿಧರ್ ಶೆಟ್ಟಿ ಮತ್ತು ಚೇತನ್ ಕುಮಾರ್ ಪಿ. ತೇರ್ಗಡೆ

Madhyama Bimba

ಕೆಮ್ಮಣ್ಣು ನಿಟ್ಟೆಯ ವಿದ್ಯಾರ್ಥಿನಿಯ ಅದ್ಭುತ ಸಾಧನೆ

Madhyama Bimba

ಕಾಂತಾವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More