ಕಾರ್ಕಳ

ಕ್ರೈಸ್ಟ್‌ಕಿಂಗ್: ಭಾರತೀಯ ಕಂಪೆನಿ ಸೆಕ್ರೆಟರಿ(ಸಿಎಸ್-ಇಇಟಿ) ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ

ಕಾರ್ಕಳ: ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ-2025(ಸಿಎಸ್‌ಇಇಟಿ)ಯಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು 2025-26 ನೇ ಸಾಲಿನಲ್ಲಿ ಅಮೋಘ ಸಾಧನೆಯನ್ನು ದಾಖಲಿಸಿದೆ.

ಒಟ್ಟು 11 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಿಂದ ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ.

ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಜೇಡನ್ ಕುವೆಲ್ಲೊ 200ಕ್ಕೆ 171ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಕಾರ್ಕಳ ತಾಲೂಕಿನಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ. ಉಳಿದಂಂತೆ ದಿಶಾಂತ್(166/200), ಜಿತೇಶ್ ಪಿಂಟೊ (147/200), ಮೊಹಮ್ಮದ್ ಸುಬಾನ್ (144/200), ಪೂರ್ಣೇಶ್ವರಿ (141/200), ವೀಕ್ಷಿತ್ ಆಚಾರ್ಯ (131/200), ಸಿಯಾ ಕ್ಯಾರೊಲ್ ಡಿಕ್ರೂಸ್(123/200), ಮಹಿಪಾಲ್ ಸಿಂಗ್(119/200) ಸ್ವಸ್ತಿಕ್ ಎಸ್ ಪೂಜಾರಿ (118/200), ನಿರಾಲಿ ಜೈನ್ (100/200), ಶ್ರಾವ್ಯ (100/200) ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ.

 

ಈ ಎಲ್ಲಾ ವಿದ್ಯಾರ್ಥಿಗಳು ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಸಿಎ ಮತ್ತು ಸಿಎಸ್ ತರಬೇತಿ ತಂಡದಿಂದ ತರಬೇತಿಯನ್ನು ಪಡೆದುಕೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

ಅಜೆಕಾರು: ಕಾಣೆಯಾದ ವೃದ್ಧರೋರ್ವರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತ್ಯು

Madhyama Bimba

ಕ್ರೈಸ್ಟ್‌ಕಿಂಗ್: ದ್ವಿತೀಯ ಪಿಯುಸಿ ಮರುಮೌಲ್ಯಮಾಪನ- ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದ ಪ್ರಜ್ವಲ್ ಶೆಟ್ಟಿ- ಉಡುಪಿ ಜಿಲ್ಲೆಗೆ ದ್ವಿತೀಯ ರ್‍ಯಾಂಕ್

Madhyama Bimba

ಕಾರ್ಕಳ: ಮುಡಾರು ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More