ಕಾರ್ಕಳಹೆಬ್ರಿ

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆತ-ವಾಹನ ಸಂಚಾರಕ್ಕೆ ತೊಂದರೆ

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.


ನ. 11ರಂದು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳ ಪಡುವ ಹೆಬ್ರಿ ತಾಲೂಕು ಕುರ್ಪಾಡಿ-ಖಜಾನೆ- ಮುನಿಯಾಲು ರಸ್ತೆಯ ಭಾಗಗಳಲ್ಲಿ ಜೆ.ಸಿ.ಬಿ/ಹಿಟಾಚಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಇಲಾಖಾ ಅನುಮತಿಯಿಲ್ಲದೆ ಅನಧಿಕೃತವಾಗಿ ರಸ್ತೆಯ ಭಾಗದಲ್ಲಿ ಅಗೆದು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಮಾಡುವುದಲ್ಲದೇ ಸರಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿ ನಷ್ಟ ಉಂಟು ಮಾಡಿದ್ದಾರೆ.


ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಸಿ.ಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ- ಗಾಯ

Madhyama Bimba

ಸೂರಾಲು: ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಡೆಗೆ

Madhyama Bimba

ಕಾಂತಾವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More