ಕಾರ್ಕಳ

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ- ಗಾಯ

ಕಾರ್ಕಳ: ಕುಕ್ಕುಂದೂರು ಜೋಡುರಸ್ತೆ ಕುಲಾಲ್ ಮಂದಿರದ ಬಳಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾದ ಘಟನೆ ಜ. 24ರಂದು ವರದಿಯಾಗಿದೆ.


ಕೇರಳ ಕೊಜಿಕೊಡ ನಿವಾಸಿ ಸೂರ್ಯನ್ ಗಾಯಗೊಂಡವರು.

ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಕಾರಿನ ಚಾಲಕ ಮೊಹಮ್ಮದ್ ಹನೀಫ್ ತನ್ನ ಕಾರನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತುಕೊಂಡಿದ್ದ ಸೂರ್ಯನ್ ರವರಿಗೆ ಢಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮ ಸೂರ್ಯನ್‌ರವರು ಡಾಮಾರು ರಸ್ತೆಗೆ ಬಿದ್ದು, ತಲೆಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದೆ.

ಚಿಕಿತ್ಸೆಯಗಾಗಿ ಕಾರ್ಕಳ ಟಿಎಮ್ ಎ ಪೈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ನಂತರ ಮಂಗಳೂರು ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಬಚ್ಚಪ್ಪು ಮೇಲ್ಜಡ್ಡು ಕ್ಷೇತ್ರದಲ್ಲಿ ಚಂಡಿಕಾಯಾಗ, ನೇಮೋತ್ಸವ

Madhyama Bimba

ಮಂಗಳೂರು ವಿ ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್ – ಆಳ್ವಾಸ್ ಚಾಂಪಿಯನ್

Madhyama Bimba

ಕಾರ್ಕಳದಲ್ಲಿ 24 ರಿಂದ 26ರವರೆಗೆ ಬೃಹತ್ ಹಲಸು ಮೇಳ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More