Blog

ಜನನಿ ಮಿತ್ರ ಮಂಡಳಿ ಅತ್ತೂರು ಇದರ ವಾರ್ಷಿಕೋತ್ಸವ

ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ  ಪದವು ಅತ್ತೂರು, ನಿಟ್ಟೆ ಗ್ರಾಮ ಇದರ ರಜತ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ದಿನಾಂಕ 14-02-2026ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಲಿದೆ.

ಆ ಪ್ರಯುಕ್ತ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ. ನಂತರ ಭಜನಾ ಕಾರ್ಯಕ್ರಮ ನೆರವೇರಲಿದೆ. ಸಂಜೆ 4 ರಿಂದ 6 ಗಂಟೆಯವರೆಗೆ ಸ್ಥಳೀಯ ಭಜನಾ ತಂಡಗಳಿಂದ ಕುಣಿತ ಭಜನೆ ನೆರವೇರಲಿದೆ. ಸಂಜೆ 6 ರಿಂದ 7.30ರವರೆಗೆ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ‘ಬಲಿ ತೆಲಿಪಾಲೆ’ ಕಾರ್ಯಕ್ರಮ. 7.30 ರಿಂದ 8.30 ರವರೆಗೆ ಸ್ಥಳೀಯರಿಂದ ಜಾನಪದ ನೃತ್ಯ, ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8.30 ಕ್ಕೆ ಸರಿಯಾಗಿ ಗುಂಡ್ಯಡ್ಕ ಹಿಂದೂ ರುದ್ರಭೂಮಿಯ ನವೀಕರಣದ ಕಟ್ಟಡದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಸಾಯಿಶಕ್ತಿ ಕಲಾ ಬಳಗ ಇವರಿಂದ ಜೋಡು ಜೀಟಿಗೆ ಪೌರಾಣಿಕ ತುಳು ನಾಟಕ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಪೆರ್ವಾಜೆ ಉಮಾನಾಥ ಪ್ರಭು ನಿಧನ

Madhyama Bimba

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

Madhyama Bimba

ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More