Blog

ಇನ್ನಾ ಗ್ರಾಮ ಪಂಚಾಯತ್ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

ಗ್ರಾಮಾಭಿವೃದ್ಧಿಗೆ  ಗಾಂಧೀಜಿಯವರು  ಕಂಡ   ಗ್ರಾಮ ಸ್ವರಾಜ್‌  ಕನಸನ್ನು  ನಾವು ಸಹಕಾರಗೊಳಿಸಬೇಕಾಗಿ  ಇನ್ನಾ ಗ್ರಾಮ ಪಂಚಾಯತ್‌  ಕಳೆದ 5 ವರ್ಷಗಳ  ಆಡಳಿತದ  ಜನಪರ  ಹಾಗೂ ಗ್ರಾಮೀಣದ ಅಭಿವೃದ್ದಿಗೆ  ವಿಶೇಷ ಆದ್ಯತೆ ನೀಡಿದೆ  ಸರಕಾರದ  ಯೋಜನೆಗಳನ್ನು ಅನುಷ್ಠಾನಗೊಳಿಸುವ  ಮುಖಾಂತರ ಇಂದು  ಇಂತಹ  ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ ಎ ಗಫೂರ್ ತಿಳಿಸಿದ್ದಾರೆ.

  .ಇನ್ನಾ ಗ್ರಾಮ ಪಂಚಾಯತ್‌  ವ್ಯಾಪ್ತಿಯ ನೂತನ ಇನ್ನಾ ಅಂಗನವಾಡಿ ಕೇಂದ್ರ ಕಟ್ಟಡವು  ದಿನಾಂಕ 26/01/2026 ನೇ ಸೋಮವಾರ  ಇನ್ನಾ ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ ಮತ್ತು ಸವಲತ್ತು ವಿತರಣೆ  ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ  ಅಧ್ಯಕ್ಷ ರಾದ  ಎಂ. ಎ. ಗಪೂರ್‌ ಉದ್ಘಾಟಿಸಿ  ಮಾತನಾಡಿದರು        
                           ಸಮಾರಂಭದ  ಅಧ್ಯಕ್ಷತೆಯನ್ನುಇನ್ನಾ ಗ್ರಾ.ಪಂ ಅದ್ಯಕ್ಷ ರಾದ ಶ್ರೀಮತಿ  ಸರಿತ ಶೆಟ್ಟಿ ವಹಿಸಿದರು . ಮುಖ್ಯ ಅತಿಥಿಗಳು ತಾಲೂಕು  ಗ್ಯಾರಂಟಿ ಸಮಿತಿ ಅದ್ಯಕ್ಷರಾದ ಶ್ರೀ ಅಜಿತ್‌ ಹೆಗ್ಡೆ  ಮಾಳ ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶ್ರೀಲತಾ ,ಗ್ರಾ ಪಂ  ಉಪಾಧ್ಯಕ್ಷ ರಾದ ಶ್ರೀಮತಿ ವಿಮಲ ಸದಸ್ಯರಾದ ಶ್ರೀ ದೀಪಕ್‌ ಕೋಟ್ಯಾನ್‌ ,ಶ್ರೀಮತಿ  ಶರ್ಮಿಳಾ, ಶ್ರೀಮತಿ ಕಸ್ತೂರಿ , ಶ್ರೀ ಪ್ರೇಮ್‌ ಕುಲಾಲ್‌ ,ಶ್ರೀಮತಿ ಸಮೀಕ್ಷಾ ಶೆಟ್ಟಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ  ವಿ ಸದಾಶಿವ ಮೂಲ್ಯ ಶಕ್ತಿ ಸಂಜಿವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಜಾತ ಗಿರಿಯಪ್ಪ , ಬಾಲವಿಕಾಸ  ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಲಕ್ಷ್ಮೀ ̧  ಉಪಸ್ಥಿತರಿದ್ದರು . ಅಂಗನವಾಡಿ ಸೇವೆ  ಮಾಡಿದ   ಶ್ರೀಮತಿ  ಪುಷ್ಪಾ ,ಶ್ರೀಮತಿ ಉಷಾ ,ಶ್ರೀಮತಿ ಸುಜಾತ ಇವರನ್ನು ಸನ್ಮಾನಿಸಲಾಯಿತು  ಗ್ರಾ. ಪಂ. ನಿಕಟ ಪೂರ್ವ ಅಧ್ಯಕ್ಷರಾದ  ಶ್ರೀ ಕುಶ ಆರ್‌ ಮೂಲ್ಯ  ಸ್ವಾಗತಿಸಿದರು ಗ್ರಾ ಪಂ ಸದಸ್ಯರಾದ  ಶ್ರೀ ಚಂದ್ರಹಾಸ ಶೆಟ್ಟಿ ವಂದಿಸಿದರು. ಸ್ತ್ರೀ  ಶಕ್ತಿ  ಸಂಘದ ಸದಸ್ಯರು ಮತ್ತು ,ಎಲ್ಲಾ ಸಿಬ್ಬಂದಿ  ವರ್ಗ  ಸಹಕರಿಸಿದರು . ವಿಜಯರಾವ್‌ ಕೇದಿಗೆ ಕಾರ್ಯ ಕ್ರಮ  ನಿರೂಪಿಸಿದರು.

Related posts

ಸಹಕಾರ ನೀಡಿದ ಪರಸ್ಪರ ಸೇವಾ ಟ್ರಸ್ಟ್

Madhyama Bimba

ಹಿರ್ಗಾನ ಸಮೀಪ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ -ಗಾಯ

Madhyama Bimba

ದ್ವಿತೀಯ ಪಿ ಯು ಸಿಯಲ್ಲಿ ಶ್ರೇಯಾoಕ್ ಆರ್ ಶೆಟ್ಟಿ 9 ನೇ ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More