Blog

ಭಕ್ತಿ ವೆಂಕಟೇಶ್ ರಿಗೆ ಶಾರ್ಜಾದ ಪುರಸ್ಕಾರ

ಕಾರ್ಕಳದ  ಕುಮಾರಿ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಪ್ರತಿಷ್ಠಿತ ‘ಶಾರ್ಜಾ ಎಜುಕೇಶನಲ್ ಎಕ್ಸಲೆನ್ಸ್ ಅವಾರ್ಡ್’ (ಶಾರ್ಜಾ ಶೈಕ್ಷಣಿಕ ಅತ್ಯುತ್ತಮ ಪ್ರಶಸ್ತಿ) ಲಭಿಸಿದೆ.

ಇವರು ವೆಂಕಟೇಶ್ ಹೆಗ್ಡೆ ಬೋಳ ಮತ್ತು ಶ್ರೀಮತಿ ಕಾರ್ಕಳ ಅಶ್ವಿನಿ ಭಟ್ ದಂಪತಿಗಳ ಪುತ್ರಿ ಹಾಗೂ ಶಾರ್ಜಾದ ದೆಹಲಿ ಪ್ರೈವೇಟ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


ಫೆಬ್ರವರಿ 14, 2026 ರಂದು ಶಾರ್ಜಾದ ಆಡಳಿತಗಾರರಾದ ಘನತೆವೆತ್ತ ಡಾ. ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರಿಂದ ಭಕ್ತಿ ಈ ಗೌರವವನ್ನು ಸ್ವೀಕರಿಸಿದರು.

ಅತ್ಯುತ್ತಮ ಶೈಕ್ಷಣಿಕ ಸಾಧನೆ, ಅನುಕರಣೀಯ ವ್ಯಕ್ತಿತ್ವ, ನಾಯಕತ್ವ ಗುಣಗಳು ಮತ್ತು ಕಲಿಕೆಯ ಕಡೆಗಿನ ಅವರ ಸಮರ್ಪಣಾ ಮನೋಭಾವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಾಧನೆಯು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕಾರ್ಕಳ ಮತ್ತು ಉಡುಪಿ ಸಮುದಾಯಕ್ಕೆ ಅಪಾರ ಹೆಮ್ಮೆ ತಂದಿದೆ.

ಇವರು ಕಾರ್ಕಳದ ಸಾಲ್ಮರದ ಡಾ. ಪ್ರಶಾಂತ್ ಹೆಗ್ಡೆರವರ ಸಹೋದರನ ಪುತ್ರಿ ಆಗಿದ್ದಾರೆ

Related posts

ಕಾರ್ಕಳದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಯುವ ಕಾಂಗ್ರೆಸ್ ಅರೋಪ

Madhyama Bimba

ಕಾರ್ಕಳದಲ್ಲಿ ಹಿಂದೂ ವಿರೋಧಿ ಕೃತ್ಯ – ತಹಸೀಲ್ದಾರ್ ರಿಗೆ ಮನವಿ ಮಾಡಿದ ಸಂಘಟನೆಗಳು

Madhyama Bimba

ಬೋಳ ಸಹಕಾರ ಸಂಘದ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More