ಕಾರ್ಕಳಹೆಬ್ರಿ

ಹೆಬ್ರಿಯ ಸಾಧಕರಿಗೆ ಚೈತನ್ಯ ಪುರಸ್ಕಾರ

ಹೆಬ್ರಿ ತಾಣ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆಯ ಅಂಗವಾಗಿ ಚೈತನ್ಯ ಯುವ ವೃಂದ ಹೆಬ್ರಿ ಆಶ್ರಯದಲ್ಲಿ ಸಾಧಕರಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ಧಾರ್ಮಿಕ, ಕೃಷಿ ಕ್ಷೇತ್ರದ ಹಿರಿಯಣ್ಣ ನಾಯ್ಕ್ಕ್ ಬಚ್ಚಪ್ಪು, ಸಾರ್ವಜನಿಕ ಸೇವಾ ಕ್ಷೇತ್ರದ ಮೆಸ್ಕಾಂ ನಿವೃತ್ತ ಲೈನ್ ಮ್ಯಾನ್ ಸುಂದರ ಪೂಜಾರಿ, ಯಕ್ಷಗಾನ ಕ್ಷೇತ್ರದ ಭಾಗವತ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಪುತ್ತಿಗೆ ಶ್ರೀಗಳ ಕೋಟಿ ಲೇಖನ ಯಜ್ಞ ವಿಶೇಷ ಪ್ರತಿಭೆ ಅಧ್ವೇತ್ ಚಾರ, ಗಣರಾಜ್ಯೋತ್ಸವ ಪೆರೆಡಲ್ಲಿ ಭಾಗವಹಿಸಿದ ಎನ್ ಸಿ ಸಿ ಕೇಡೆಟ್ ವೈಷ್ಣವಿ ವಿ ಪ್ರಭು, ಮತ್ತು ಪ್ರತಿಭಾ ಕಾರಂಜಿಯ ರಾಜ್ಯಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿನಿ ವರ್ಷಿಣಿ ಕುಲಾಲ್ ಮುಳ್ಳುಗುಡ್ಡೆ ಇವರಿಗೆ ಚೈತನ್ಯ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹೆಬ್ರಿ ದೇವಳದ ಅನುವಂಶೀಯ ಮೊಕ್ತೇಸರ ಹೆಚ್ ತಾರಾನಾಥ್ ಬಲ್ಲಾಳ್ ನಾರಾಯಣ ಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮಂಜುನಾಥ ಪೂಜಾರಿ , ಅಮೃತ ಭಾರತಿ ಟ್ರಸ್ಟಿ ಗುರುದಾಸ್ ಶೆಣೈ, ಹೆಬ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೆಗಾರ್ ಭಾಗವಹಿಸಿದ್ದರು. ನಾರಾಯಣ ಗುರು ಅಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷ ಮಂಜುನಾಥ ಪೂಜಾರಿಯವರನ್ನು ಗೌರವಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಚೈತನ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಎಚ್ ಪ್ರಕಾಶ್ ಮಲ್ಯ ಗೌರವಾಧ್ಯಕ್ಷ ಜನಾರ್ದನ್ ಎಚ್ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಉಪಸ್ಥಿತರಿದ್ದರು.

ಅಧ್ಯಕ್ಷ ಪ್ರವೀಣ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಆಚಾರ್ಯ ವರದಿ ವಾಚಿಸಿದರು ಕ್ರೀಡಾ ಕಾರ್ಯದರ್ಶಿ ನಿತೀಶ್ ಎಸ್ ಪಿ ಸಾಧಕರನ್ನು ಪರಿಚಯಿಸಿದರು.
ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಚೈತನ್ಯ ಕಲಾವಿದರು ಇವರಿಂದ ರಾಘು ಮಾಸ್ಟ್ರ್ ತುಳು ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.

Related posts

ಕ್ರಿಯೇಟಿವ್ ಕಾಲೇಜಿನಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭ

Madhyama Bimba

ಕಾರ್ಕಳ: ಕೆಸರುಗದ್ದೆಗೆ ಬಿದ್ದು ಉಸಿರುಗಟ್ಟಿ ವ್ಯಕ್ತಿ ಮೃತ್ಯು

Madhyama Bimba

ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ಬ್ರಹ್ಮ ರಥೋತ್ಸವ ಸಂಪನ್ನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More