ನೆಲ್ಲಿಕಾರು ಇಲ್ಲಿಯ ಮಾಂಟ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶೋಕ್ ಕುಮಾರ್, ಹಾಲಿ ಉಪಾಧ್ಯಕ್ಷ ಮುಖೇಶ್ ಪೂಜಾರಿ ಸಹಿತ 10 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಎರಡು ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವ ಕಾರಣ ಇದನ್ನು ಖಾಲಿ ಇಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರದಸ, ವಿಲಾಸ್ ತಿಳಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಿರುವ 6 ಸ್ಥಾನಗಳಿಗೆ ಅನುಕ್ರಮವಾಗಿ ಸತ್ಯೇಂದ್ರ ಕೋಟ್ಯಾನ್, ಜಗದೀಶ, ರಮೇಶ್ ಪೂಜಾರಿ, ಅಶೋಕ್ ಕುಮಾರ್, ಮುಖೇಶ್ ಪೂಜಾರಿ ಮತ್ತು ಬೇಬಿ, ಹಿಂ.ವ.ಎ.ಗೆ ಮೀಸಲಿರುವ ಸ್ಥಾನದಿಂದ ಗಂಗಾಧರ, ಹಿಂ.ವ.ಬಿ.ಗೆ ಮೀಸಲಿರುವ ಸ್ಥಾನದಿಂದ ಜೋನ್ ಬ್ಯಾಪ್ಟಿಸ್ಟ್ ಡಿಸಿಲ್ವ, ಮಹಿಳೆಯರಿಗೆ ಮೀಸಲಿರುವ ಎರಡು ಸ್ಥಾನಗಳಿಗೆ ಸರೋಜ ಮತ್ತು ಬೇಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
