ಕಾರ್ಕಳ

ಕಾರ್ಕಳ: ಕಾರಿಗೆ ಟೂರಿಸ್ಟ್ ಟ್ಯಾಕ್ಸಿ ಡಿಕ್ಕಿ- ಗಾಯ

ಕಾರ್ಕಳ: ಮುಡಾರು ಗ್ರಾಮದ ಕಡಾರಿ ಬಳಿ ವರ್ನಾ ಹುಂಡೈ ಕಾರಿಗೆ ಟೂರಿಸ್ಟ್ ಟ್ಯಾಕ್ಸಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಮೇ. 29ರಂದು ನಡೆದಿದೆ.

ಹಾವೇರಿ ಜಿಲ್ಲೆಯ ಶರತ್ ಗುಂಡೇನಹಳ್ಳಿ (37)ರವರು ವರ್ನಾ ಹುಂಡೈ ಕಾರಿನಲ್ಲಿ ಹೆಂಡತಿ ದಿವ್ಯಾ ಮುಗದುರ, ಮಗಳು ಲಾಸ್ಯಾ ಮುಗದುರ, ಅತ್ತೆ ಶೀಲಾ ಮುಗದುರ, ಮತ್ತು ಮಾವ ಶಿವಪ್ಪ ಮುಗದುರವರೊಂದಿಗೆ ಪ್ರವಾಸ ಹೊರಟಿದ್ದು, ಶ್ರಿಂಗೇರಿ ಕಡೆಯಿಂದ ಬಜಗೋಳಿ ಕಡೆಗೆ ಬರುತ್ತಿರುವಾಗ ಬಜಗೋಳಿ ಕಡೆಯಿಂದ ಶ್ರಿಂಗೇರಿ ಕಡೆಗೆ ಹೋಗುತ್ತಿದ್ದ ಟೂರಿಸ್ಟ್ ಟ್ಯಾಕ್ಸಿ ಚಾಲಕ ಸಾತ್ವಿಕ್ ಹೆಗ್ಡೆ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಲಾಸ್ಯ, ಶೀಲಾ ಮುಗದುರ ಹಾಗೂ ಶಿವಪ್ಪ ಮುಗದುರ ಗಾಯಗೊಂಡಿರುತ್ತಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಬಾಗದ ಕಳ್ಳತನವೇ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಈ ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ- ಉದಯ ಶೆಟ್ಟಿ ಮುನಿಯಾಲು

Madhyama Bimba

ಜ. 14ರಿಂದ 16: ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ

Madhyama Bimba

ಭಾರತ ವಾಲಿಬಾಲ್ ತಂಡದ ನಾಯಕಿಯಾಗಿ ಕಾರ್ಕಳದ ಶಗುನ್ ಎಸ್ ವರ್ಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More