ಕಾರ್ಕಳ

ಕಾರ್ಕಳ: ಹಿಂಸಾತ್ಮಕವಾಗಿ ದನ ಸಾಗಾಟ- ಪ್ರಕರಣ ದಾಖಲು

ಕಾರ್ಕಳ: ಹಿಂಸಾತ್ಮಕವಾಗಿ ದನ ಸಾಗಾಟ ಮಾಡಿತ್ತಿದ್ದವರ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯ ಸಿಹೆಚ್‌ಸಿ ಲೋಕೇಶ್ (52) ಇವರು ನೀರೆ ಬೈಲೂರು ಪರಿಸರದಲ್ಲಿ ರೌಂಡ್ಸ್ ಮುಗಿಸಿ ಕಾರ್ಕಳಕ್ಕೆ ವಾಪಾಸು ಬರುತ್ತಿರುವಾಗ ಕುಕ್ಕಂದೂರು ಗ್ರಾಮದ ಹಾರ್ಜೆಡ್ಡು ಶ್ರೀ ದೇವಿ ಕೃಪಾ ಹಾಲ್ ನ ಎದುರುಗಡೆ ರಸ್ತೆ ಬದಿಯಲ್ಲಿ ಟಾಟಾ ಇಂಟ್ರ ಕಂಪೆನಿಯ ಗೂಡ್ಸ್ ವಾಹನವೊಂದು ಕಾರ್ಕಳ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ಆ ವಾಹನದ ಹಿಂದುಗಡೆಯಿಂದ ನೀರು ಇಳಿಯುತ್ತಿದ್ದದನ್ನು ನೋಡಿ ಅನುಮಾನಗೊಂಡು ಪರಿಶೀಲಿಸಿದಾಗ ಅದರೊಳಗೆ 2 ದನಗಳನ್ನು ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿದೆ.

ಈ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ವಧೆ ಮಾಡಲು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿದೆ.

Related posts

ಆಡಳಿತ ನ್ಯಾಯಾಧೀಕರಣ ತರಬೇತಿ: ಅರ್ಜಿ ಆಹ್ವಾನ

Madhyama Bimba

ಮುದ್ರಾಡಿ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ, ಸಾಧಕ ವಿದ್ಯಾರ್ಥಿಗಳಿಗೆ ಮತ್ತು ದಾನಿಗಳಿಗೆ ಸನ್ಮಾನ

Madhyama Bimba

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಎನ್ ಎಸ್ ಎಸ್ ವಾರ್ಷಿಕ ಶಿಬಿರದ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More