ಕಾರ್ಕಳ

ದೇಹದಾರ್ಡ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ: ಮುದ್ರಾಡಿಯ ನೈದಿಲ್ ಪೂಜಾರಿ ಅವರಿಗೆ ಸನ್ಮಾನ

ಹೆಬ್ರಿ : ಬೆಂಗಳೂರಿನಲ್ಲಿ ನಡೆದ 70 ಕೆಜಿ ವಿಭಾಗದ ವಿಟಿಯು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಮೋಸ್ಟ್ ಮಸ್ಕ್ಯುಲರ್ ಮ್ಯಾನ್ ಪಟ್ಟ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮುದ್ರಾಡಿಯ ನೈದಿಲ್ ಪೂಜಾರಿ ಅವರನ್ನು ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.


ನೈದಿಲ್ ಪೂಜಾರಿ ಮುದ್ರಾಡಿಯ ಸುಕುಮಾರ್ ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಮಾತನಾಡಿ ದೈವರಾಧನೆ ಮಾಡುತ್ತಿರುವ ಸುಕುಮಾರ್ ಪೂಜಾರಿ ಅವರ ಮಗನ ಸಾಧನೆಯನ್ನು ಶ್ಲಾಘಿಸಿದರು.


ಸುಕುಮಾರ್ ಪೂಜಾರಿ ಅಭಿನಂದಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಪೂಜಾರಿ, ಕಾರ್ಯದರ್ಶಿ ಸಂತೋಷ ಪೂಜಾರಿ ಬಲ್ಲಾಡಿ, ಕೋಶಾಧಿಕಾರಿ ರತ್ನಾಕರ ಪೂಜಾರಿ ಕುಚ್ಚೂರು, ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ ತೆಂಕೋಡು, ಕಾರ್ಯದರ್ಶಿ ಸುನೀಲ್ ಪೂಜಾರಿ ಕನ್ಯಾನ, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಎಸ್ ಪೂಜಾರಿ, ಕಾರ್ಯದರ್ಶಿ ಹೇಮಾವತಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿತೀಶ್ ಎಸ್.ಪಿ ಸ್ವಾಗತಿಸಿದರು.

 

Related posts

ವರಂಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Madhyama Bimba

ಕಾರ್ಕಳ: ವಿಷ ಸೇವನೆ- ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Madhyama Bimba

ಗ್ರಾಮ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳಿಗೆ ಅಡ್ಡಿಪಡಿಸಿರುವ ಬಿಜೆಪಿಗರಿಂದ ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಂಬದ್ದ ಹೇಳಿಕೆ ಖಂಡನೀಯ: ಭಾನು ಭಾಸ್ಕರ್ ಪೂಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More