ಕಾರ್ಕಳ

ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನೀರೆ ಬೈಲೂರು: ಭೋಜನ ಶಾಲೆಯ ಶಂಕುಸ್ಥಾಪನೆ, ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ

ಬೈಲೂರು: ಬೈಲೂರು ಗೋವಿಂದೂರು ರಸ್ತೆಯ ಬಿಲ್ಲವ ಸಂಘದ ಬಳಿಯಿರುವ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ ಬೈಲೂರು ಇದರ ನೂತನ ಸಭಾಭವನದ ಭೋಜನ ಶಾಲೆಯ ಶಂಕುಸ್ಥಾಪನೆ ಹಾಗೂ ಸ್ಥಳದ ನಾಗಸಾನಿಧ್ಯದಲ್ಲಿ ಪವಮಾನ ಕಲಶಾಭಿಷೇಕ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆಯು ಹರೀಶ್ ಪುರೋಹಿತ್ ನೇತೃತ್ವದಲ್ಲಿ ಜ್ಯೋತಿರ್ವಿದ್ವಾನ್ ಅಜಿತ ಆಚಾರ್ಯ ಪಂಚನಬೆಟ್ಟು ಇವರ ಪ್ರಧಾನ ಆಚಾರ್ಯತ್ವದಲ್ಲಿ ಮಾ. 08ರಂದು ನಡೆಯಲಿದೆ.


ಬೆಳಿಗ್ಗೆ 8.00 ರಿಂದ ನಾಗಸಾನಿಧ್ಯದಲ್ಲಿ ಪವಮಾನ ಕಲಶಾಭಿಷೇಕ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಬೆಳಿಗ್ಗೆ 10.30ಕ್ಕೆ ಭೋಜನ ಶಾಲೆಯ ಶಂಕು ಸ್ಥಾಪನೆ, ಮಧ್ಯಾಹ್ನ 12.00ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.00 ರಿಂದ ಅನ್ನಸಂತರ್ಪಣೆ, ಮಧ್ಯಾಹ್ನ 2.30 ರಿಂದ ಸಂಘದ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ಶಾಸಕ ವಿ. ಸುನಿಲ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷರಾದ ದಿನೇಶ್ ಆಚಾರ್ಯ ಕಂಡಲ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಕಟಪಾಡಿ ಶ್ರೀ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಮುರಹರಿ ಆಚಾರ್ಯ, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ೨ನೇ ಮೊಕ್ತೇಸರರಾದ ಪ್ರವೀಣ್ ಆಚಾರ್ಯ ರಂಗನಕೆರೆ, ಅವಿಭಜಿತ ದಕ್ಷಿಣ ಕನ್ನಡ ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ, ಜ್ಯೋತಿಷ್ಯರಾದ ವಿದ್ವಾನ್ ಅಜಿತ ಆಚಾರ್ಯ, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ, ಅವಿಭಜಿತ ದಕ್ಷಿಣ ಕನ್ನಡ ಉಡುಪಿ ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷರಾದ ಯೋಗೀಶ್ ಆಚಾರ್ಯ ಅಲೆವೂರು, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಬೈಲೂರು, ಬೈಲೂರು ಕೆನರಾ ಬ್ಯಾಂಕ್‌ನ ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕರಾದ ಲಕ್ಷ್ಮಣ ಆಚಾರ್ಯ ಕಂಡಲ್ಕೆ, ಕಾರ್ಕಳ ಉಷಾ ಜ್ಯುವೆಲ್ಲರ್ಸ್ ಮತ್ತು ಉಷಾಲಕ್ಷ್ಮೀ ಜ್ಯುವೆಲ್ಲರ್ಸ್‌ನ ಅಮಿತ್ ಆಚಾರ್ಯ, ಚಾರ್ಟೆಡ್ ಅಕೌಂಟೆಂಟ್ ರಮೇಶ್ ರಾವ್ ಕರ್ವಾಲು, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಉಪಾಧ್ಯಕ್ಷರಾದ ಹೆಚ್. ರಾಜೇಶ್ ಆಚಾರ್ಯ ಮಠದ ಬೆಟ್ಟು ಹೆಬ್ರಿ,
ನೀರೆ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು, ಎರ್ಲಪಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಸುನಿಲ್ ಹೆಗ್ಡೆ, ಹಿರಿಯಡ್ಕ ಶ್ರೀ ಮೂಕಾಂಬಿಕಾ ಸಿವಿಲ್ ಕನ್ಸಟ್ರಕ್ಷನ್‌ನ ರತ್ನಾಕರ ಆಚಾರ್ಯ, ಮಂಗಳೂರು ಕೇಂದ್ರೀಯ ಸುಂಕ ಇಲಾಖೆಯ ಎ. ಸತೀಶ್ ಆಚಾರ್ಯ ಭಾಗವಹಿಸಲಿದ್ದಾರೆ.

Related posts

ಅ. 5-10 ರ ವರೆಗೆ, ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯ ವಿವಿಧೆಡೆ ಸಂಚಾರ

Madhyama Bimba

ಶುಲ್ಕ ಮರುಪಾವತಿ: ಅರ್ಜಿ ಆಹ್ವಾನ

Madhyama Bimba

ವಲಯ ಮಟ್ಟದ ಕ್ರೀಡಾಕೂಟ: ರೋಟರಿ ಕ್ಲಬ್ ಕಾರ್ಕಳ ಚಾಂಪಿಯನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More