ಕಾರ್ಕಳ

ಹೆಬ್ರಿ: ಕಾರಿಗೆ ಬೊಲೆರೋ ವಾಹನ ಡಿಕ್ಕಿ

ಹೆಬ್ರಿ: ನಾಡ್ಪಾಲು ಗ್ರಾಮದ ಸೋಮೇಶ್ವರ ಹೆಗ್ಡೆ ಹೋಟೇಲ್ ಬಳಿ ಶಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಏ. 01ರಂದು ವರದಿಯಾಗಿದೆ.

ತೀರ್ಥಹಳ್ಳಿಯ ಕೆ ಎನ್ ಗಣೇಶರವರು ತನ್ನ ಶಿಪ್ಟ್ ಕಾರಿನಲ್ಲಿ ತಾಯಿ ವಿಶಾಲಾಕ್ಷಿ, ಅಕ್ಕ ಮಾನಸ, ಬಾವ ಮಹೇಶ್‌ರವರೊಂದಿಗೆ ಮಣಿಪಾಲ ಆಸ್ಪತ್ರೆಗೆ ಬರುತ್ತಿರುವಾಗ ಬೊಲೆರೋ ವಾಹನವನ್ನು ಚಾಲಕ ಠೋಣಿ ಥೋಮಸ್‌ರವರು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮವಾಗಿ ಎರಡೂ ವಾಹನಗಳು ಚರಂಡಿಗೆ ಬಿದ್ದು ಜಖಂಗೊಂಡಿದ್ದು, ವಿಶಾಲಾಕ್ಷಿ ಹಾಗೂ ಮಹೇಶ್ ರವರು ಗಾಯಗೊಂಡಿರುತ್ತಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ ವಕೀಲರ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಕ್ರೈಸ್ಟ್‌ಕಿಂಗ್: ವಿಶ್ವ ಪರಿಸರ ದಿನಾಚರಣೆ

Madhyama Bimba

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More