ಕಾರ್ಕಳ

ಅಕ್ರಮ ಮಾದಕ ವಸ್ತು ಮಾರಾಟ ಪ್ರಕರಣ- ಬಂಗ್ಲೆಗುಡ್ಡೆ ನಿವಾಸಿ ಫೈಸಲ್ ಪೊಲೀಸ್ ವಶಕ್ಕೆ

ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಫೈಜಲ್ ಎಂಬಾತನನ್ನು ಕಾರ್ಕಳ ಪೊಲೀಸರು ಅಕ್ರಮ ಮಾದಕ ವಸ್ತು ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಹಲವಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಈತನನ್ನು ಹೊರಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಈ ಆದೇಶವನ್ನು ಜಾರಿ ಮಾಡಲು ಹೋದ ಪೊಲೀಸರ ಮೇಲೆ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ತೆಂಗಿನಮರಕ್ಕೆ ಡಿಕ್ಕಿ ಹೊಡೆದು ಓಡಿಹೋಗಿದ್ದ.

ಈ ಸಂದರ್ಭದಲ್ಲಿ ಕಾರನ್ನು ಪರಿಶೀಲಿಸಿದ ಪೊಲೀಸರಿಗೆ ಅದರಲ್ಲಿ ಮಾದಕ ವಸ್ತುವಾದ ಗಾಂಜಾ ಪತ್ತೆಯಾಗಿತ್ತು. ಈ ಆರೋಪಿ ಜೊತೆಗೆ ಇನ್ನೊಬ್ಬ ಆರೋಪಿ ಸೇರಿ ಇವರು ಮಾದಕ ವಸ್ತು ಮಾರಾಟ ಮಾಡಲು ಕಾಯುತ್ತಿದ್ದರು.

ಈ ಫೈಜಲ್ ಎಂಬಾತ ಕಾರ್ಕಳದಲ್ಲಿ ರೌಡಿಯಾಗಿ ಹತ್ಯೆಗೀಡಾಗಿದ್ದ ಸುಲೇಮಾನ್ ಎಂಬಾತನ ಪುತ್ರ ಎಂದು ತಿಳಿದುಬಂದಿದೆ.

Related posts

ಕರಾಟೆ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

Madhyama Bimba

ಜ.3ರಂದು ಮಿಯ್ಯಾರು ಲವಕುಶ ಜೋಡುಕರೆ ಕಂಬಳ

Madhyama Bimba

ನೀರೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು ದಂಪತಿಗೆ ಅದ್ದೂರಿ ನಾಗರಿಕ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More