ಕಾರ್ಕಳ

ತ್ರಿಂಶತಿ ಸಂಭ್ರಮದಲ್ಲಿರುವ ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಗೆ ರೂ 5.02 ಕೋಟಿ ನಿವ್ವಳ ಲಾಭ ಹಾಗೂ ನೂತನ ವಾಣಿಜ್ಯ ಸಂಕೀರ್ಣದ ಲೋಕಾರ್ಪಣ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯೊಂದಿಗೆ 8 ಶಾಖೆಗಳ ಮೂಲಕ ಆರ್ಥಿಕ ವ್ಯವಹಾರ ನಡೆಸುತ್ತಿರುವ ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯು2025-26 ಸಾಲಿನಲ್ಲಿ 1151 ಕೋಟಿಗೂ ಮೀರಿ ವ್ಯವಹಾರ ನಡೆಸಿ ರೂ 5.02೨ ಕೋಟಿ ನಿವ್ವಳ ಲಾಭ ಗಳಿಸಿದೆ.

1996ರಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರಿಂದ ಉದ್ಘಾಟಿಸಲ್ಪಟ್ಟ ಸಂಘವು ಇದೀಗ ತ್ರಿಂಶತಿ ಸಂಭ್ರಮದಲ್ಲಿದ್ದು, 4.78 ಕೋಟಿ ಪಾಲು ಬಂಡವಾಳ, ರೂ .30.02 ಕೋಟಿ ಸ್ವಂತ ನಿಧಿ , ರೂ 254.50ಕೋಟಿ ಠೇವಣಿ ಹಾಗೂ ರೂ 211.90 ಕೋಟಿ ಸಾಲ ನೀಡಿ ಸರ್ವಾಂಗಿಣ ಅಭಿವೃದ್ಧಿ ಸಾಧಿಸಿರುವುದು ಗ್ರಾಹಕರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಹಾಗೂ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನದ ಫಲವಾಗಿದೆ ಎಂದು ಸಂಘದ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭುರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು .

ಸಂಘವು ಪ್ರಾರಂಭವಾಗಿ 30 ಸಂವತ್ಸರ ಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ತ್ರಿಂಶತಿ ಸಂಭ್ರಮಾಚರಣೆಯ ಪ್ರಯುಕ್ತ ಕಾರ್ಯಕ್ರಮದಲ್ಲಿ ನೂತನ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂದೂರ” ಇದರ ಲೋಕಾರ್ಪಣ ಕಾರ್ಯಕ್ರಮವು ಏಪ್ರಿಲ್ 26 ರಂದು ಆತ್ಯಂತ ಅಭೂತಪೂರ್ವವಾಗಿ ಜರುಗಲಿದ್ದು , ಕಾರ್ಯಕ್ರಮದ ಉದ್ಘಾಟಕರಾಗಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪೇಜಾವರ ಮಠ ಉಡುಪಿ, ಪದ್ಮವಿಭೂಷಣ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ, ಸಹಕಾರ ರತ್ನ ಡಾ ಎಂ ಏನ್ ರಾಜೇಂದ್ರ ಕುಮಾರ್ ಅಧ್ಯಕ್ಷರು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿ ಮಂಗಳೂರು ಉಪಸ್ಥಿತರಿರುವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಏ.03 ರಂದು ಸೊಸ್ಯಟಿಯ “ರಾಜಾಪುರ ಸಭಾಭವನ” ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಡಾರಿ ರವೀಂದ್ರ ಪ್ರಭುರವರ ಅಧ್ಯಕ್ಷತೆಯಲ್ಲಿ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ದ ಆಡಳಿತ ಮೋಕ್ತೆಸರರಾದ ಚೇತನ್ ನಾಯಕ್ ಕಲಂಬಾಡಿ ನಿಟ್ಟೆ ಹಾಗು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಜಯರಾಮ ಪ್ರಭು ಗಂಪದಬೈಲು ಸೂಡ ಇವರು ಅತಿಥಿ ಗಣ್ಯರ ಸಮಕ್ಷಮ ದಲ್ಲಿ ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ಕಾರ್ಕಳ ರಾಜಾಪುರ ಸಾರಸ್ವತ ಭ್ರಾಹ್ಮಣ ಸಂಘದ ಅಧ್ಯಕ್ಷರಾದ ಸದಾಶಿವ ಪ್ರಭು, ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಬಾಹ್ಮಣ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ನಾಯಕ್, ರಾಜಾಪುರ ಸಾರಸ್ವತ ಬಾಹ್ಮಣ ಸಂಘ ಪಳ್ಳಿ ಇದರ ಅಧ್ಯಕ್ಷರಾದ ಅರುಣ್ ನಾಯಕ್, ಸ್ಮರಣ ಸಂಚಿಕೆ ಸಂಪಾದಕೀಯ ಮಂಡಳಿಯ ಸದಸ್ಯರಾದ ರಘುನಾಥ್ ನಾಯಕ್ ಉಡುಪಿ, ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಗಾನ ಮಂಡಳಿಯ ಅಧ್ಯಕ್ಷೆ ಮಾಧವಿ, ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತಿರುವ ಡಾ . ಜನಾರ್ಧನ ನಾಯಕ್ ಅಜೆಕಾರು ಉಪಸ್ಥಿತರಿದ್ದರು.
ಸಂಘದ ಆಡಳಿತ ಮಂಡಳಿ ಸದಸ್ಯರು, ಮಾಜಿ ನಿರ್ದೇಶಕರು , ಶಾಖ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗ , ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭುರವರು ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಿ ತ್ರಿಂಶತಿ ಸಂಭ್ರಮವು ಯಶಸ್ವಿಯಾಗಿ, ಅಭೂತಪೂರ್ವವಾಗಿ ಜರುಗುವ ನಿಟ್ಟಿನಲ್ಲಿ ಸರ್ವರ ಸಹಕಾರವನ್ನು ಕೋರಲಾಯಿತು.

ಸಂಘದ ನಿರ್ದೇಶಕರಾದ ಹರೀಶ್ ನಾಯಕ್ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ನೀರೇ ರವೀಂದ್ರ ನಾಯಕ್ ರವರು ಪ್ರಸ್ತಾವಿಕ ಮಾತುಗಳೊಂದಿಗೆಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸುರೇಂದ್ರ ನಾಯಕ್ ಧನ್ಯವಾದವಿತ್ತರು.

 

 

Related posts

ಕ್ರಿಯೇಟಿವ್ ಉಡುಪಿ ಶಾಖೆಯ ಹೊಂಗಿರಣ ಉಚಿತ ಶಿಕ್ಷಣಕ್ಕೆ ಬೆಳಗಾವಿಯಲ್ಲಿ ಅರ್ಹತಾ ಪರೀಕ್ಷೆ

Madhyama Bimba

ಪ್ರಗತಿಬಂಧು ಸ್ವ ಸಹಾಯ ಸಂಘಗಳಿಗೆ ನೂತನ 700 ಸದಸ್ಯರ ಸೇರ್ಪಡೆ ಕಾರ್ಯಕ್ರಮ

Madhyama Bimba

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್‌ನ ರಾಜ್ಯ ಉಪಾಧ್ಯಕ್ಷರಾಗಿ ಬೈಲೂರು ಕನಿಷ್ಕ್ ಹೆಗ್ಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More