ಕಾರ್ಕಳ

ಕುಕ್ಕುಂದೂರು ಅರ್ಬಿಪಾದೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ: ಪ್ರಕರಣ ದಾಖಲು

ಕಾರ್ಕಳ: ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿರುವ ಸರ್ವೇ ನಂಬ್ರ 281 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವವರ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮುರಳೀಧರ ನಾಯ್ಕ್ ದಾಳಿ ನಡೆಸಿ 2 ಲಾರಿ ವಶಪಡಿಸಿಕೊಂಡು ಏ. 15ರಂದು ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.

ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿ ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಸದ್ರಿ ಪ್ರದೇಶದಲ್ಲಿ KA 19 B 7745 ನೇ ನಂಬ್ರದ ಟಿಪ್ಪರ್ ಲಾರಿ ಚಾಲಕ ಮತ್ತು KA 40 1801 ನೇ ಲಾರಿ ಚಾಲಕ ಸೇರಿಕೊಂಡು ಸಂಘಟಿತರಾಗಿ ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದರು.

 

ಈ ಸಂದರ್ಭ ಚಾಲಕರನ್ನು ವಶಕ್ಕೆ ಪಡೆದು ಕಲ್ಲು ತೆಗೆಯಲು ಉಪಯೋಗಿಸಿದ 2 ಚಮ್ಮಡಿ, 1 ಕಬ್ಬಿಣದ ಹಾರೆ, 2 ಕಬ್ಬಿಣದ ಚಾಣ, 1 ಕಬ್ಬಿಣದ ಸರಳು ಮತ್ತು ಸೈಜ್ ಕಲ್ಲುಗಳನ್ನು ಲೋಡ್ ಮಾಡಿದ KA 19 B 7745 ನಂಬ್ರದ ಟಾಟಾ ಕಂಪೆನಿಯ ಟಿಪ್ಪರ್ ಮತ್ತು KA 40 1801 ನಂಬ್ರದ ಖಾಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಬಂದು   ಆರೋಪಿತರಾದ ಮನೋಜ್ ಮತ್ತು ಶರಣ್ ಎಂಬವರ ವಿರುದ್ಧ ಕಾನೂನು ಕ್ರಮದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ

Madhyama Bimba

ಕ್ರೈಸ್ಟ್‌ಕಿಂಗ್: ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂಸ್ಥೆಗೆ ಸಮಗ್ರ ಛಾಂಪಿಯನ್ ಪ್ರಶಸ್ತಿ- ಬಾಲಕಿಯರ ತಂಡಕ್ಕೆ ತಂಡ ಪ್ರಶಸ್ತಿ, ಫಿಯೋನಾ ಪಿಂಟೋ ವೈಯಕ್ತಿಕ ಛಾಂಪಿಯನ್

Madhyama Bimba

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More