ಕಾರ್ಕಳಹೆಬ್ರಿ

ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರದಿಂದ ಮೊದಲ ಹಂತದ ಅನುದಾನ ಬಿಡುಗಡೆ: ಕೃತಜ್ಞತೆ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಸಮಿತಿ

2027 ರಲ್ಲಿ ಕಾರ್ಕಳ ಭಗವಾನ್ ಬಾಹುಬಲಿ ಮೂರ್ತಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದ್ದು ಅದರ ಮೂಲಭೂತ ಸೌಕರ್ಯಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಅಲ್ಪ ಸಂಖ್ಯಾತ ಇಲಾಖೆಯ ಮೂಲಕ ಮೊದಲ ಹಂತದಲ್ಲಿ 1.59 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಈ ಅನುದಾನದಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿ ನಿಲಯ ನಿರ್ಮಾಣ, ಕಾರ್ಕಳ ಗ್ರಾಮೀಣ ಪ್ರದೇಶದಲ್ಲಿರುವ ಅಜೆಕಾರು ರೆಂಜಾಳ, ಮುಂಡ್ಲಿ, ಶಿರ್ಲಾಲು, ಸೂಡಿ ಮತ್ತು ನಲ್ಲೂರು ಕುಷ್ಮಾಂಡಿನಿ ಬಸದಿಗಳ ಸಂಪರ್ಕ ರಸ್ತೆ ಅಭಿವೃದ್ಧಿ ಜೊತೆಗೆ ಜೈನ ಮಠದ ತ್ಯಾಗಿ ಭವನ ಮಾತಾಜಿ ಭವನ ಸಭಾಂಗಣ ನವೀಕರಣ ಬೆಟ್ಟಕ್ಕೆ ನೀರು ಸರಬರಾಜು ಮತ್ತು ಕೊಳವೆ ಬಾವಿ ನಿರ್ಮಾಣ ಕಾರ್ಯ ಕೈಗೊಳ್ಳಲು ಅನುದಾನವು ಬಿಡುಗಡೆಯಾಗಿದೆ.

ಮಹಾ ಮಸ್ತಕಾಭಿಷೇಕವು ಯಶಸ್ವಿಯಾಗಿ ನಡೆಯಲು ಅನುಕೂಲವಾಗುವಂತೆ ಇನ್ನು ಅನೇಕ ಇಲಾಖೆಯ ಮೂಲಕ ಅನುದಾನವು ಬಿಡುಗಡೆಯಾಗುವ ನಿರೀಕ್ಷೆಯಿದ್ದು ಮೊದಲ ಹಂತದ ಅನುದಾನ ಬಿಡುಗಡೆಗೊಳಿಸಿದ ಕರ್ನಾಟಕ ಸರ್ಕಾರಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಕೃತಜ್ಞತೆ ತಿಳಿಸಿದ್ದಾರೆ.

Related posts

ದುರ್ಗದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿ ಮಹಾಸಭೆ

Madhyama Bimba

ವಲಯ ಸಂಯೋಜಕರ ಹುದ್ದೆ: ಅರ್ಜಿ ಆಹ್ವಾನ

Madhyama Bimba

ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More