ಕಾರ್ಕಳ

ಅಂಚೆ ಇಲಾಖೆ ವತಿಯಿಂದ ಪತ್ರ ಲೇಖನ ಸ್ಪರ್ಧೆ

ಅಂಚೆ ಇಲಾಖೆಯು ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಪಿಟೇಷನ್ ಪ್ರಯುಕ್ತ 9 ರಿಂದ 15 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ “Write a letter to a friend about why human connection matters in a digital world” ಎಂಬ ವಿಷಯದ ಕುರಿತು ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಸ್ಪರ್ಧಾಳುಗಳು ಪತ್ರಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ 800 ಶಬ್ದಗಳು ಮೀರದಂತೆ ಕೈ ಬರಹದಲ್ಲಿ ನಿಗಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ.


ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ತಮ್ಮ ಶಾಲೆಯ ಮುಖಾಂತರ ಫೆಬ್ರವರಿ 14 ರ ಒಳಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇಲ್ಲಿಗೆ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಮೂರು ಪತ್ರಲೇಖನಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000, 25,000, 10,000ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 ರೂ. ನೀಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ದೂ.ಸಂಖ್ಯೆ: 0820-2526144, 2520471   ಹಾಗೂ 2521780 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.

Related posts

ಕಡ್ತಲ: ಆರಿ ಕೌಶಲ್ಯ ತರಬೇತಿ ಕಾರ್ಯಕ್ರಮ

Madhyama Bimba

ಹೆಬ್ರಿ: ಓಮ್ನಿ ಹಾಗೂ ಬೈಕ್ ಅಪಘಾತ- ಗಾಯ

Madhyama Bimba

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More