ಹೆಬ್ರಿ: ಮುದ್ರಾಡಿ ಗ್ರಾಮದ ಮದಗ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದವನ ಮೇಲೆ ಪ್ರಕರಣ ದಾಖಲಾದ ಘಟನೆ ಏ. 15ರಂದು ವರದಿಯಾಗಿದೆ.


ಹೆಬ್ರಿ ಠಾಣಾ ಪಿ.ಎಸ್.ಐ (ತನಿಖೆ) ಚಂದ್ರ ಎ ಕೆ ರವರು ಹೆಬ್ರಿ ಪೇಟೆಯಲ್ಲಿ ರೌಂಡ್ಸ್ ನಲ್ಲಿರುವಾಗ ಠಾಣಾ ಹೆಚ್ ಸಿ, ಪ್ರದೀಪ್ ರವರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮುದ್ರಾಡಿಯ ಸಚಿನ್ (24) ಎಂಬಾತನು ಒಂದು ರೂಪಾಯಿಗೆ 70 ರೂಪಾಯಿ ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕೂಗಿ ಕರೆದು ಮಟ್ಕಾ ಜುಗಾರಿ ಆಟವಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದುಕೊಂಡರು.’


ಮಟ್ಕಾ ಆಟವನ್ನು ತಾನು ಸ್ವಂತ ಲಾಭಕ್ಕಾಗಿ ಆಡುತ್ತಿರುವುದಾಗಿ ಹಾಗೂ ಸಂಗ್ರಹಿಸಿದ ಹಣವನ್ನು ಸಂತೋಷ ಎಂಬವರಿಗೆ ನೀಡುತ್ತಿರುವುದಾಗಿ ಬಾಯಿಬಿಟ್ಟಿರುತ್ತಾನೆ.


ಆತನ ಬಳಿ ಇದ್ದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು 1690/- ರೂ, ಹಾಗೂ ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ವಶಪಡಿಸಿಕೊಂಡಿದ್ದಾರೆ.



ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
