ಕಾರ್ಕಳ

ಸಿಬಿಎಸ್ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಗೆ ಶೇ. 100 ಫಲಿತಾಂಶ

ಕಾರ್ಕಳ: ಪ್ರಸಕ್ತ ಶೈಕ್ಷಣಿಕ ವರ್ಷ 2025-26ರ ಸಿಬಿಎಸ್ಸಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಯು ನಿರಂತರವಾಗಿ 100% ಫಲಿತಾಂಶವನ್ನು ಈ ವರ್ಷವೂ ಗಳಿಸುವುದರೊಂದಿಗೆ ಕಳೆದ ಹಲವಾರು ವರ್ಷಗಳಿಂದ ಗಳಿಸಿಕೊಂಡು ಬಂದ ಶೈಕ್ಷಣಿಕ ಸಾಧನೆಯನ್ನು ಈ ವರ್ಷವೂ ಸಾಧಿಸಿದೆ.

ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.(ಐಚ್ಚಿಕ ವಿಷಯಗಳನ್ನು ಹೊರತುಪಡಿಸಿ)
ಇದಲ್ಲದೆ ೮ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ಇಬ್ಬರು ವಿದ್ಯಾರ್ಥಿಗಳು ಸಂಸ್ಕೃತ ವಿಷಯದಲ್ಲಿ ನೂರು (100/100) ಅಂಕಗಳನ್ನು ಗಳಿಸಿದ್ದಾರೆ. ಈ ಪ್ರಸಕ್ತ ವರ್ಷದಲ್ಲಿ 92.6% ಅಂಕವನ್ನು ಗಳಿಸಿದ ವಿದ್ಯಾರ್ಥಿನಿಯು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.

ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಮಾಣಿಕ ಶಿಕ್ಷಕರ ಮಾರ್ಗದರ್ಶನ, ಪೋಷಕರ ನಿರಂತರ ಬೆಂಬಲ ಹಾಗೂ ವಿದ್ಯಾರ್ಥಿಗಳ ಪ್ರಾಮಾಣಿಕ ಪರಿಶ್ರಮ ಕಾರಣವಾಗಿದೆ.

ಈ ಸಾಧನೆಯನ್ನು ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Related posts

ಶಿರ್ಲಾಲು ಸೂರ್ಯಂಥೋಕ್ಲು ಶಾಲೆಯಲ್ಲಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

ಎನ್.ಡಿ.ಎ ಪ್ರವೇಶ ಪರೀಕ್ಷೆ:  ಜ್ಞಾನಸುಧಾದ ಹನ್ನೊಂದು ವಿದ್ಯಾರ್ಥಿಗಳು ತೇರ್ಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More