ಕಾರ್ಕಳ

ಕಾರ್ಕಳ: ಅಟೋರಿಕ್ಷಾಕ್ಕೆ ಕಾರು ಡಿಕ್ಕಿ

ಕಾರ್ಕಳ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ನಿಟ್ಟೆ ಸಮೀಪ ಅಟೋರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ರಿಕ್ಷಾದಲ್ಲಿದ್ದವರು ಗಾಯಗೊಂಡ ಘಟನೆ ಏ. 15ರಂದು ವರದಿಯಾಗಿದೆ.


ಸಾಣೂರಿನ ರಿಚಾರ್ಡ್ ಸ್ವಿಕೇರ (61) ತನ್ನ ಅಟೋ ರಿಕ್ಷಾದಲ್ಲಿ ಕವಿತಾ ಮತ್ತು ಅವರ ಸಣ್ಣ ಇಬ್ಬರು ಮಕ್ಕಳನ್ನು ಕುಳ್ಳಿರಿಸಿಕೊಂಡು ದೂಪದಕಟ್ಟೆಯಿಂದ ನಿಟ್ಟೆ ಪಂಚಾಯತ್ ಕಡೆಗೆ ಹೋಗುತ್ತಿರುವಾಗ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಅಟೋರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದಿದೆ.


ಡಿಕ್ಕಿಯ ಪರಿಣಾಮ ಅಟೋರಿಕ್ಷಾ ಮಗುಚಿ ಬಿದ್ದು, ರಿಚಾರ್ಡ್ ಸ್ವಿಕೇರ ಹಾಗೂ ಕವಿತಾ ಗಾಯಗೊಂಡಿದ್ದು, ಇಬ್ಬರು ಮಕ್ಕಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ.


ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಂಟೇನರ್ ಲಾರಿ ಡಿಕ್ಕಿ-ಗಾಯ

Madhyama Bimba

10ನೇ ವರ್ಷದ ಸಂಭ್ರಮದಲ್ಲಿ ಕಾರ್ಕಳದ ಶ್ರೀ ವಿಜಯಲಕ್ಷ್ಮೀ ಫ್ಯಾಬ್ರಿಕ್ಸ್-ದೀಪಾವಳಿಯ ಪ್ರಯುಕ್ತ ಲಕ್ಕಿ ಕೂಪನ್, ವಿಶಿಷ್ಟ ಬಹುಮಾನಗಳು

Madhyama Bimba

ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲೆಯ ಬಾವಿ ಸ್ವಚ್ಛತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More