ಕಾರ್ಕಳ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೆವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಅಭಿಷೇಕ್ ಡಿ ಜಿ, ಕೆ. ಎಸ್ ಗಣೇಶ, ಕಾನಿಷ್ಕ್‌ಎಸ್.ಅಮೀನ್, ಮೋದಕ್ ಪಿ.ಆರ್, ಎನ್‌ಎಸ್ ವಿವೇಕ್, ನಿಧೀಶ್ ಸುದೀಪ್ ಕುಮಾರ್, ರೋಚಕ್ ಪ್ರಮೋದ್ ಬಡಿಗೇರ್, ಸಾಯಿ ರಾಘವೇಂದ್ರ ಬಿ.ಎಸ್, ಶ್ರೀನಿವಾಸ ರೆಡ್ಡಿ ಮೇಟಿ, ವೀರೇಶ್ ಜಗದೀಶ್ ತೇಲಿ ಹಾಗೂ ವಿಶಾಲ್ ತೇರ್ಗಡೆಗೊಂಡಿದ್ದಾರೆ.
ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ 10 ವಿದ್ಯಾರ್ಥಿಗಳು ಬಿ.ಟೆಕ್‌ನಲ್ಲಿ, 6 ವಿದ್ಯಾರ್ಥಿಗಳು ಬಿ.ಆರ್ಕ್‌ನಲ್ಲಿ, 11 ವಿದ್ಯಾರ್ಥಿಗಳು ಬಿ.ಪ್ಲಾನಿಂಗ್‌ನಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿರುತ್ತಾರೆ.
ಸಾಧಕರನ್ನುಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್‌ನಅಧ್ಯಕ್ಷರಾದಡಾ.ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸಕ ಮತ್ತುಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
