ಮೂಡುಬಿದಿರೆ

ಮೂಡುಬಿದಿರೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಾದಾರ್ಪಣೆ-  35ನೇ ಶಾಖೆ ಏ.19ರಂದು ಉದ್ಘಾಟನೆ: ಬೋಳಾರ್

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಿಕ್ಕಮಗಳೂರು ವ್ಯಾಪ್ತಿಯನ್ನು ಹೊಂದಿರುವ ಮಂಗಳೂರಿನಲ್ಲಿ ಕೇಂದ್ರ ಶಾಖೆ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮೂಡುಬಿದಿರೆಯಲ್ಲಿ 35ನೇ ಶಾಖೆಯ ಉದ್ಘಾಟನೆ ನಡೆಯಲಿದೆ.

ಮೂಡುಬಿದಿರೆಯ ಮುಖ್ಯ ರಸ್ತೆಯ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ಏಪ್ರಿಲ್ 19ರಂದು ಪೂರ್ವಾಹ್ನ 11ಗಂಟೆಗೆ ಉದ್ಘಾಟನೆ ನಡೆಯಲಿದೆ. ಈವರೆಗೆ 34 ಶಾಖೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಸಂಘ ಮೂಡುಬಿದಿರೆಯಲ್ಲಿ ತನ್ನ ನೂತನ 35ನೇ ಶಾಖೆಯನ್ನು ಏಪ್ರಿಲ್ 19 ರಂದು ಬೆಳಿಗ್ಗೆ 11.00 ಗಂಟೆಗೆ ಶುಭಾರಂಭ ಮಾಡಲಿದೆ ಎಂದು ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.


ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಮ್. ಎನ್ ರಾಜೇಂದ್ರ ಕುಮಾರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಉಮಾನಾಥ ಎ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಐ. ತಾರನಾಥ ಪೂಜಾರಿ ಭದ್ರತಾಕೋಶವನ್ನು ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ್ ಎಸ್ ಕೋಟ್ಯಾನ್ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ ಇ-ಮುದ್ರಾಂಕ ಸೇವೆಗೆ ಚಾಲನೆ ನೀಡಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ. ಉಳಿತಾಯ ಖಾತೆಗೆ, ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಆವರ್ತನ ಖಾತೆಗೆ ಹಾಗೂ ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಪಿಗ್ಮಿ ಖಾತೆಗೆ ಚಾಲನೆ ನೀಡಲಿದ್ದಾರೆ.


ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು, ಜಗದೀಶ್ಚಂದ್ರ ಡಿ.ಕೆ, ಸೀತಾರಾಮ್ ಆಚಾರ್ಯ, ಶ್ರೀಪತಿ ಭಟ್ ಹಾಗೂ ಕಟ್ಟಡದ ಮಾಲೀಕ ಸುರೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ನೇಮಿರಾಜ್ ಪೂಜಾರಿ, ನಿರ್ದೇಶಕ ಪರಮೇಶ್ವರ್ ಪೂಜಾರಿ, ಗೋಪಾಲ್ ಎನ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಗಂಜಿಮಠ ಶಾಖೆಯ‌ ಮೆನೇಜರ್ ಸಂದೀಪ್, ಮೂಡುಬಿದಿರೆ ಶಾಖೆಯ ಮೆನೇಜರ್ ರವಿಕಲಾ ಸುದ್ದಿಗೋಷ್ಠಿಯಲ್ಲಿದ್ದರು.

ಸಂಘದ ಕಾರ್ಯಚಟುವಟಿಕೆಗಳು: 2012ರಲ್ಲಿ ಪ್ರಾರಂಭಗೊಂಡ ಸಂಘವು 92ಸಿಬ್ಬಂದಿ ಹಾಗೂ 112ಜನ ಪಿಗ್ಮಿ ಸಂಗ್ರಹಗಾರರನ್ನು ಹೊಂದಿದ್ದು 95ಶೇಖಡಾ ಮಹಿಳಾ ಸಿಬ್ಬಂದಿಗಳ ಮೂಲಕ ಮುನ್ನಡೆಯುತ್ತಿದೆ. 325ಕೋಟಿ ವಾರ್ಷಿಕ ವ್ಯವಹಾರ, 168ಕೋಟಿ ಚಿನ್ನಾಭರಣ ವ್ಯವಹಾರ ನಡೆಸಿ 3.5ಕೋಟಿ ಅಧಿಕ ಲಾಭ ಹೊಂದಿದೆ. ಜನರ ಅಗತ್ಯಗಳಿಗೆ ಅನುಗುಣವಾಗಿ ಸಾಲ ವ್ಯವಸ್ಥೆ ಇದೆ. ಆರೋಗ್ಯಶಿಬಿರ, ಉಚಿತ ಕನ್ನಡಕ ವಿತರಣೆ, ನೀರುಮಾರ್ಗದಲ್ಲಿ ಮನೆ ಪುನರ್ನಿರ್ಮಾಣ, 40.50ಲಕ್ಷ ವಿದ್ಯಾರ್ಥಿವೇತನ ವಿತರಣೆ, ಸ್ವಸಹಾಯ ಗುಂಪುಗಳ ಸಬಲೀಕರಣ ಸೇರಿದಂತೆ ಸಾಮಾಜಿಕ ಕಾರ್ಯ ನಡೆಸುತ್ತಿರುವುದನ್ನು ತಿಳಿಸಿದರು. ಮಕ್ಕಳ ಆರ್ಥಿಕ ಪ್ರಗತಿಗೆ ಅನುಕೂಲವಾಗುವ ಮಕ್ಕಳ ನಿಧಿ ಯೋಜನೆ ಬಗ್ಗೆ ತಿಳಿಸಿದರು.


ನೂತನ ಶಾಖೆಯ ಉದ್ಘಾಟನೆಯ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ಶೇ. 10 ಹಾಗೂ 1000 ದಿನಗಳ ಠೇವಣಿಗಳಿಗೆ ಶೇ. 10.50 ರಷ್ಟು ವಿಶೇಷ ಬಡ್ಡಿ ದರವನ್ನು ನೀಡಲಾಗುತ್ತಿದೆ. ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಠ ರೂ. 12,000/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಶಾಖೆಯಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್‌ಟಿಜಿಎಸ್ ಸೇವೆಗಳು ಹಾಗೂ ವಿವಿಧ ವಿಮಾ ಕಂಪೆನಿಗಳ ಸೌಲಭ್ಯಗಳು ಲಭ್ಯವಿರಲಿವೆ ಎಂದು ಅವರು ಮಾಹಿತಿ ನೀಡಿದರು.

Related posts

ಪತ್ರಕರ್ತ ವೇಣುಗೋಪಾಲ್, ಶೇಖರ್ ಅಜೆಕಾರ್ ಸಂಸ್ಮರಣೆ, ಬಹುಭಾಷಾ ಕವಿಗೋಷ್ಟಿ

Madhyama Bimba

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Madhyama Bimba

ದರೆಗುಡ್ಡೆ ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟದಿಂದ ಪಂಚಾಯತ್ ಜನಪ್ರತಿನಿಧಿಗಳಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More