ಮೂಡುಬಿದಿರೆ

ಜೇಸಿ ರಾಷ್ಟ್ರೀಯ ತರಬೇತುದಾರರಾಗಿ ವಿಕ್ರಮ ನಾಯಕ್

ಅಂತಾರಾಷ್ಟ್ರೀಯ ಸಂಸ್ಥೆ ಜೇಸಿಸ್‌ನ ರಾಷ್ಟ್ರೀಯ ತರಬೇತುದಾರರಾಗಿ ಕಾರ್ಕಳದ ಜೇಸಿ ವಿಕ್ರಮ ನಾಯಕ್ ಕೆ ಪದವಿಯನ್ನು ಪಡೆದಿರುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.

ವಿಕ್ರಮ ನಾಯಕ್ ಅವರು ಒಂದೂವರೆ ದಶಕಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಜೀವನ ಕೌಶಲ ತರಬೇತಿಯನ್ನು ನೀಡಿರುತ್ತಾರೆ.
ಗ್ಲೋಬಲ್ ಕರಿಯರ್ ಕೌನ್ಸೆಲಿಂಗ್ ಸಂಸ್ಥೆಯಿಂದ ಪ್ರಮಾಣೀಕೃತ ವೃತ್ತಿ ಮಾರ್ಗದರ್ಶಕರಾಗಿಯೂ ಇಲ್ಲಿಯವರೆಗೆ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.


ಪ್ರಸ್ತುತ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿದ್ದು ಜೇಸಿಐ ಮಂಗಳೂರು ಸಾಮ್ರಾಟ್ ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

Madhyama Bimba

ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯುವಶ

Madhyama Bimba

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸಿಬ್ಬಂದಿ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More