ಮೂಡುಬಿದಿರೆ

ಚಿಕಿತ್ಸೆಗಾಗಿ ಸಾಯಿ ನೆರವು

ಪಡುಮಾರ್ನಾಡ್: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಇದರ 93ನೇ ಸೇವಾ ಯೋಜನೆ
ಏಪ್ರಿಲ್ ತಿಂಗಳ ಮೊದಲ ಯೋಜನೆಯ ರೂ. 10,000ವನ್ನು ಅನಾರೋಗ್ಯ ಹೊಂದಿರುವ ಕಾರ್ಕಳ ತಾಲೂಕಿನ ಸಚ್ಚರಿ ಪೇಟೆ ಪರಿಸರದ ಕುದ್ರುಬೆಟ್ಟು ಮನೆಯ ಉದಯ್ ಸುವರ್ಣ ಎಂಬವರ ಚಿಕಿತ್ಸೆಗೆ ನೀಡಲಾಯಿತು.

ವೃತ್ತಿಯಲ್ಲಿ ಮೊದಲು ಲೈನ್ ಸೇಲ್ ಮಾಡುತ್ತಿದ್ದ ಉದಯ್ ಸುವರ್ಣ ಅವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಒಳಗಾಗಿ ಹಾಸಿಗೆಯಲ್ಲೇ ಮಲಗಿಕೊಂಡಿದ್ದಾರೆ. ಇವರಿಗೆ 3ಜನ ಮಕ್ಕಳಿದ್ದು, ದೊಡ್ಡ ಪುತ್ರಿ ಡಿಗ್ರಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಬ್ಬ ಮಗ ಪಿ. ಯು.ಸಿ. ಮುಗಿಸಿದ್ದು ಇನ್ನೊಬ್ಬ ಪುತ್ರ ಪ್ರಥಮ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಉದಯ್ ಸುವರ್ಣ ಅವರ ತಾಯಿ ಕೂಡ ಅನಾರೋಗ್ಯ ದಲ್ಲಿದ್ದಾರೆ. ಪತ್ನಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಈಗ ಮನೆ ಖಚು೯ ಹಾಗೂ ಅವರ ಔಷಧಿ ವೆಚ್ಚ ಭರಿಸಲು ಹಣದ ಅವಶ್ಯಕತೆ ಇರುವುದರಿಂದ ಸೇವಾ ಸಂಘ ದಿಂದ 93ನೇ ಸೇವಾ ಯೋಜನೆ ಯ 10000ರೂಪಾಯಿಯ ಚೆಕ್ಕನ್ನು ಮೂಡುಬಿದಿರೆ ಮಾರಿಗುಡಿ ದೇವಸ್ಥಾನ ಬಳಿ ಹಸ್ತಾಂತರಿಸಲಾಯಿತು.

Related posts

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಖೋ-ಖೋ ಪಂದ್ಯಾಟ: ೧೭ನೇ ಬಾರಿಗೆ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Madhyama Bimba

ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

Madhyama Bimba

ಆದೂರು , ಮಂದಾರ ಸಹಿತ 10 ಮಂದಿಗೆ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More