ಕಾರ್ಕಳ

ಮಹಾಭಾರತದ ನೂರಾರು ಕಥೆಗಳು – ಉಪನ್ಯಾಸ ಮಾಲಿಕೆ

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಜಂಟಿಯಾಗಿ ಆಯೋಜಿಸಿದ ಮಹಾಭಾರತ ಭಾವದೀಪದ ಚತುರ್ಥ ಸೋಪಾನ ನೂರಾರು ಕಥೆಗಳು ಉಪನ್ಯಾಸ ಮಾಲಿಕೆ ಹೋಟೆಲ್ ಪ್ರಕಾಶದಲ್ಲಿ ನಡೆಯಿತು.

ಉಪನ್ಯಾಸಕರಾದ ಡಾ ವಿನಾಯಕ ಭಟ್ ಗಾಳಿಮನೆಯವರು ಕುಂತಿಗೆ ದೂರ್ವಾಸ ಮುನಿಗಳಿಂದ ಸಿಕ್ಕಿದ ೫ ವರಗಳು, ಕೌರವ ,ಪಾಂಡವರ ಹುಟ್ಟು, ವಿದುರ ನೀತಿಯ ಮಹತ್ವ, ವ್ಯಾಸರ ಕಾವ್ಯದ ಪಾರದರ್ಶಕತೆಗಳನ್ನು ಸೋದಾಹರಣವಾಗಿ ವಿವರಿಸಿದರು.

ವೇದಿಕೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ. ಮೊಗಸಾಲೆ. ಕಾರ್ಕಳ ಅಭಾಸಾಪದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು.

ಜಯರಾಮ್ ನಾಯಕ್ ರ ಶಾರದಾ ಸ್ತುತಿಯೊಂದಿಗೆ, ಅಭಾಸಾಪದ ಗೌರವ ಅಧ್ಯಕ್ಷರಾದ ನಿತ್ಯಾನಂದ ಪೈಯವರು ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿ, ಕಾರ್ಯದರ್ಶಿ ಸುಲೋಚನ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್.ವಿ.ಟಿ. ಶಾಲೆಯಲ್ಲಿ “ಸಾಹಿತ್ಯ-ಕಲೆ-ಸಾಂಸ್ಕೃತಿಕ ಸಂಘ” ಉದ್ಘಾಟನೆ

Madhyama Bimba

ಕಾರ್ಕಳ: “ಸ್ವಚ್ಚ ವಿಚಾರ್ ” ಸಂವಾದ ಕಾರ್ಯಕ್ರಮ

Madhyama Bimba

ನಿಟ್ಟೆ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್‌ಗೆ ಕಾರು ಡಿಕ್ಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More