ಕಾರ್ಕಳ

ಕ್ರೈಸ್ಟ್‌ಕಿಂಗ್: ಹತ್ತನೇ ತರಗತಿಯಲ್ಲಿ ಅಮೋಘ ಫಲಿತಾಂಶ :  ಸತತ 17ನೇ ಬಾರಿಗೆ ನೂರು ಶೇಕಡಾ ಫಲಿತಾಂಶ

ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ 100% ಶೇಕಡಾ ಫಲಿತಾಂಶದೊಂದಿಗೆ ಸತತ 17ನೇ ಬಾರಿಗೆ ನೂರು ಶೇಖಡಾ ಫಲಿತಾಂಂಶ ದಾಖಲಿಸುವ ಮೂಲಕ ಅಮೋಘ ಫಲಿತಾಂಶವನ್ನು ಪಡೆದುಕೊಂಡಿದೆ.

ಸಂಸ್ಥೆಯ ವಿದ್ಯಾರ್ಥಿ ಕೆ. ಶ್ರೀಶಾ ಪ್ರಭು 625೫ ಕ್ಕೆ 617 ಅಂಕಗಳನ್ನು ಪಡೆದು ರಾಜ್ಯಕ್ಕೆ ಒಂಬತ್ತನೇ ರ್‍ಯಾಂಕ್ ಪಡೆದುಕೊಂಡಿದ್ದಾನೆ. 18 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 95 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ ಉಳಿದಂತೆ 62 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಎರಡು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಪರೀಕ್ಷೆ ಬರೆದ ಸಂಸ್ಥೆಯ 98.74% ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 58 ವಿದ್ಯಾರ್ಥಿಗಳು ಎ+ ಅಂದರೆ 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.

600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿದೆ. ಕೆ.ಶ್ರೀಶಾ ಪ್ರಭು 617, ಅನುಶ್ರೀ ಪ್ರಭು611, ಆಯಿಷಾ ರೂಬಾ 608, ಧನ್ವಿ ಗಣೇಶ್ ಶೆಟ್ಟಿ 608,, ಟಿಸ್ಸಾ ಅಲ್ಫೋನ್ಸಾ ಆಗಸ್ಟೀನ್ 607, ಆದ್ಯಾ ಸುಧೀರ್ ಜೈನ್ 605, ಗೌತಮಿ ಪ್ರಭಾಕರ್ ಶೆಟ್ಟಿ 605. ಲೆನಿಶಾ ಡಿಸೋಜ 604, ನೋರ್ವಿನ್ ಮೆಂಡೋನ್ಸಾ 604, ಸಾನ್ವಿ ಸತೀಶ್ ಶೆಟ್ಟಿ 604, ಸ್ಲಾನಿಯಾ ನಿಸೆಲ್ ನೊರೋನ್ಹಾ 604, ಆರುಷ್ ಎಸ್ ಶೆಟ್ಟಿ 603, ಫಾತಿಮಾ ಶಿಫಾನಾ 603, ಕವನ ಕೆ ಮೂಲ್ಯ603, ಸಾನ್ವಿ ಮಾರ್ಟಿಸ್ 602, ಅನಿಷಾ ಡಿಸೋಜ 601, ಲೆನಿಶಾ ಲಿಯಾನ್ನಾ ಮೆಂಡೋನ್ಸಾ 601 ಹಾಗೂ ಶಹನುಮ್ ಫಾತಿಮಾ601 ಅಂಕಗಳನ್ನು ಪಡೆದಿದ್ದಾರೆ.

ಕನ್ನಡದಲ್ಲಿ 25, ಹಿಂದಿಯಲ್ಲಿ 21, ಗಣಿತದಲ್ಲಿ 1 ಹಾಗೂ ಸಮಾಜ ವಿಜ್ಞಾನದಲ್ಲಿ 7 ಹೀಗೆ ಒಟ್ಟು 54 ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

 

Related posts

ಸಿಎಸ್‌ಇಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Madhyama Bimba

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More