ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ 20ನೇ ವರ್ಷದ 35ನೇ ‘ಮದ್ಯ ವ್ಯಸನ ವಿಮುಕ್ತಿ ಶಿಬಿರ’ ಹಾಗೂ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ ಪ್ರಯುಕ್ತ ಬೀದಿ ನಾಟಕವು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಸ್ಥೆಯ ಸಹಕಾರದೊಂದಿಗೆ ಆಸ್ಪತ್ರೆಯ ವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಇವರ ಮಾರ್ಗದರ್ಶನದೊಂದಿಗೆ ಕಾರ್ಕಳದ ಬಸ್‌ಸ್ಟ್ಯಾಂಡ್ ವಠಾರದಲ್ಲಿ ನಡೆಯಿತು.


ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ನಾಯಕ್, ಮಾರ್ಗದರ್ಶಕರಾದ ಡಾ. ಭರತೇಶ್ ಆದಿರಾಜ್, ವಲಯ ಸೇನಾನಿ ರೋ. ಪ್ರಶಾಂತ್ ಬಿಳಿರಾಯ, ರೋ. ವೃಂದಾ ಹರಿಪ್ರಕಾಶ್ ಶೆಟ್ಟಿ, ರೋ. ಹರಿಪ್ರಕಾಶ್ ಶೆಟ್ಟಿ, ರೋ. ಶ್ರೀವರ್ಮ ಅಜ್ರಿ, ರೋ. ಇಕ್ಬಾಲ್ ಅಹ್ಮದ್, ರೋ. ಅಬ್ದುಲ್ ರೆಹಮಾನ್, ರೋ. ಉಪೇಂದ್ರ ವಾಗ್ಲೆ, ಶ್ರೀಮತಿ ಲಕ್ಷ್ಮೀ ಹೆಗಡೆ, ಶೃತಿ, ಸಹನಾ, ಅದಿತಿ ಮತ್ತು ಅನೇಕ ಪ್ರೇಕ್ಷಕರು ಬೀದಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ಕುಡಿತ ಹಾಗೂ ಇನ್ನಿತರ ದುಶ್ಚಟಗಳಿಗೆ ಬಳಲುತ್ತಿರುವ ರೋಗಿಗಳಿಗೆ ವೈದ್ಯರಾದ ವಿರೂಪಾಕ್ಷ ದೇವರಮನೆಯವರು ಜ. 1ರಿಂದ 10ರವಗೆ ಉಡುಪಿ ಡಾ. ಎ ವಿ ಬಾಳಿಗಾ ಆಸ್ಪತ್ರೆಯಲ್ಲಿ ನಡೆಯುವ ಉಚಿತ ಶಿಬಿರದಲ್ಲಿ ಸೇರಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಸುಂದರವಾಗಿ ರೂಪಿಸುವಂತೆ ಕರೆಯಿತ್ತರು.

Related posts

ಕೆಜಿಟಿಟಿಐ ಉಚಿತ ಕೌಶಲ್ಯ ತರಬೇತಿ

Madhyama Bimba

ನಕ್ರೆ: ದಿ. ಯಶವಂತಿ ಎಸ್ ಸುವರ್ಣ ಹುಟ್ಟುಹಬ್ಬದ ಪ್ರಯುಕ್ತ ಅಶಕ್ತರಿಗೆ ಆರ್ಥಿಕ ನೆರವು ವಿತರಣೆ

Madhyama Bimba

ಕಾರ್ಕಳ: ಮಹಿಳೆ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More