ಕಾರ್ಕಳಹೆಬ್ರಿ

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

ಹೆಬ್ರಿ : ಅಂದು ಕಾಲೇಜು ಸ್ಥಾಪನೆಗಾಗಿ ಹೋರಾಟ ಮಾಡಿದ್ದೇವು. ಈಗ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮುನಿಯಾಲು ಕಾಲೇಜಿನಲ್ಲಿ ಲಭಿಸುತ್ತಿರುವುದರಿಂದ ಮಕ್ಕಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಮುನಿಯಾಲು ಕಾಲೇಜು ಗ್ರಾಮೀಣ ಪ್ರದೇಶದ ಆಶಾಕಿರಣ, ಇನ್ನಷ್ಟು ಮಕ್ಕಳು ಸೇರಿ ಕಾಲೇಜು ನಿರಂತರ ಬೆಳಗಲಿ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.


ಅವರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2025-26ನೇ ಸಾಲಿನ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುನಿಯಾಲು ಪರಿಸರದ ಮಕ್ಕಳು ಯಾರೂ ಕೂಡ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕಾಲೇಜಿಗೆ ಸೇರುವ ಎಲ್ಲಾ ಮಕ್ಕಳ ಶುಲ್ಕವನ್ನು ಅಭಿವೃದ್ಧಿ ಸಮಿತಿಯ ಸದಸ್ಯರು ಭರಿಸುತ್ತಿರುವುದು ಅತ್ಯಂತ ಅಭಿಮಾನದ ಸಂಗತಿ. ಮಕ್ಕಳ ಪರಿಶ್ರಮದಿಂದ ಕಲಿತು ಉತ್ತಮ ಸಾಧನೆ ಮಾಡಬೇಕು. ಮುಂದಿನ ಅವಶ್ಯಕತೆಯ ಎಲ್ಲಾ ತಂತ್ರಜ್ಞಾನಗಳಿಗೆ ಒಗ್ಗಿಕೊಂಡು ಶಿಕ್ಷಣ ಪಡೆದು ಮುಂದುವರಿಯಬೇಕು ಕೌಶಲ್ಯಕ್ಕೆ ಆದ್ಯತೆ ನೀಡಬೇಕು. ಸಂಸ್ಥೆಯ ಸಾಧನೆಯ ಪರಂಪರೆ ಮುಂದುವರಿಯಲಿ ಎಂದು ಸುನೀಲ್ ಕುಮಾರ್ ಆಶಿಸಿದರು.

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ್ ಕೆ.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಕಾಕೇಜಿನ ಸಾಧನಯನ್ನು ತಿಳಿಸಿದರು.

ಕಲಿಯುವಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಕ್ರೀಡೆ ಸಾಧಕರು ಮತ್ತು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದ ಶ್ರೀಶಾ ಆಚಾರ್ಯ ಮತ್ತವರ ತಂಡವನ್ನು ಮತ್ತು ತಂಡಕ್ಕೆ ಮಾರ್ಗದರ್ಶನ ನಿಡಿದ ಅಜಿತ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.

ಕಾಪು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರೋ ಡಾ. ರಾಘವ ನಾಯ್ಕ್ ವಿಶೇಷ ಉಪನ್ಯಾಸ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ದಿನೇಶ ಪೈ ಮುನಿಯಾಲು, ಗೋಪಿನಾಥ ಭಟ್ ಮುನಿಯಾಲು, ಪ್ರಸನ್ನ ಶೆಟ್ಟಿ ಪಡುಕುಡೂರು, ಭರತ್ ಚಟ್ಕಲ್ ಪಾದೆ, ಶಂಕರ ಶೆಟ್ಟಿ ಮುನಿಯಾಲು, ಭುಜಂಗ ಶೆಟ್ಟಿ ಪಡುಕುಡೂರು, ಸಕರಾಮ ಶೆಟ್ಟಿ ಮುನಿಯಾಲು, ರಘುನಾಥ ಪೂಜಾರಿ ಮುಟ್ಲುಪಾಡಿ, ಚಂದ್ರಕಾಂತ್ ಅಂಡಾರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮಿತ್ರಾ, ಕಾರ್ಯದರ್ಶಿ ಗೋವಿಂದ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಶ್ವೇಶ್ವರ ಎನ್ ಗಾಂವ್ಕರ್, ಐಕ್ಯೂಎಸಿ ಸಂಚಾಲಕಿ ಝೈಬುನ್ನೀಸ ಅಬ್ದುಲ್ ರಜಾಕ್ ಹಮ್ಮಬ್ಬ, ಪ್ರಾಧ್ಯಾಪಕ ಡಾ. ಮಂಜುನಾಥ ಆಚಾರಿ, ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಹನಾ, ಶ್ರೀಶಾ ಆಚಾರ್ಯ, ದಿವ್ಯಾ, ಗಣೇಶ್ ಉಪಸ್ಥಿತರಿದ್ದರು.

ಸುಧಾಕರ್ ಕೆಜಿ ವಾರ್ಷಿಕ ವರದಿ ಮಂಡಿಸಿದರು. ಪ್ರಾಧ್ಯಾಪಕರಾದ ಆನಂದ ಕುಮಾರ್ ಸ್ವಾಗತಿಸಿ, ವಿದ್ಯಾ ನಾಯಕ್ ನಿರೂಪಿಸಿ, ಬಿಂಧು ಎ ವಂದಿಸಿದರು.

Related posts

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ:  ಮೊದಲನೇ ತ್ರೈಮಾಸಿಕ 30.06.2026ಕ್ಕೆ ಗಣನೀಯ ಪ್ರಗತಿ- ರೂ.1362 ಕೋಟಿ ವ್ಯವಹಾರ (ಠೇವಣಾತಿ + ಹೊರಬಾಕಿ ಸಾಲ)

Madhyama Bimba

ಹೆಬ್ರಿ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ-ಗಾಯ

Madhyama Bimba

ಲಯನ್ಸ್ ಕ್ಲಬ್ ಕಾರ್ಕಳ ಸಿಟಿ: ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More