ಮೂಡುಬಿದಿರೆ

ಜಿ ಎಲ್ ಆಚಾರ್ಯ ಜ್ಯವೆಲ್ಲರ್ಸ್ ವಿಸಿಟ್ & ವಿನ್ ಸ್ಪರ್ಧೆಯ ಫಲಿತಾಂಶ ಮತ್ತು ಸನ್ಮಾನ ಕಾರ್ಯಕ್ರಮ

ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ರವರ ಮೂಡಬಿದ್ರೆಯ ನೂತನ ಮಳಿಗೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ವಿಸಿಟ್ & ವಿನ್ ಸ್ಪರ್ಧೆಯಲ್ಲಿ ಸ್ಮಾರ್ಟ್ ಫೋನ್ ಬಹುಮಾನವನ್ನು ಗೆಲ್ಲುವ ಸ್ಪರ್ಧೆಯನ್ನು ಆಯೋಜಿಸಿದ್ದರು.


ಆಳ್ವಾಸ್ ವಿದ್ಯಾಸಂಸ್ಥೆಯ ಅರ್ಥಶಾಸ್ತ್ರ ವಿಭಾಗದ ಶಿಕ್ಷಕಿಯಾದ ವೀಣಾ ಆಗ್ನೆಸ್ ಡಿ’ಸೋಜಾ ಈ ಲಕ್ಕಿ ಬಾಕ್ಸ್ ವಿನ್ನರ್‌ನ್ನು ಆಯ್ಕೆಮಾಡಿದರು. ಈ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಮಮ್ತಾಝ್ ಕೂಪನ್ ನಂ.9438 ಸ್ಮಾರ್ಟ್ ಫೋನ್ ವಿಜೇತರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಈ ಬಾರಿಯ ದ್ವಿತೀಯ ಪಿಯು.ಸಿ ಪರೀಕ್ಷೆಯಲ್ಲಿ ಶೇಕಡಾ 100 ಅಂಕಗಳನ್ನು ಗಳಿಸಿ ಅದ್ಭುತ ಸಾಧನೆಯನ್ನು ಮಾಡಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ದಿಶಾ ಇವರು ವೈಯುಕ್ತಿಕ ತೊಂದರೆಗಳಿದ್ದರೂ ಔಟ್ ಆಫ್ ಔಟ್ ಅಂಕಗಳನ್ನು ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ ಇವರಿಗೆ ಜಿ ಎಲ್ ಆಚಾರ್ಯ ಹಾಗೂ ಶಾಖಾ ಸಿಬ್ಬಂದಿಯವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ “ಉತ್ತಮ ಭವಿಷ್ಯವನ್ನು ಸಾಧಿಸಲು ಇಚ್ಚೆಯಿರುವವರಿಗೆ ನಮ್ಮ ಸಂಸ್ಥೆ ಹಣ ಸಹಾಯ ನೀಡಿ, ಅವರ ಭವಿಷ್ಯದಲ್ಲಿ ಉತ್ತಮ ಯಶಸ್ಸು ದೊರಕಲಿ ಎಂದು ಆಶಿಸುತ್ತದೆ. ಅವರ ಸಾಧನೆಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಸಂಸ್ಥೆಯ ಚೇರ್‌ಮ್ಯಾನ್‌ರಾದ ಜಿ.ಎಲ್ ಬಲರಾಮ ಆಚಾರ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related posts

 ಮಹಿಳೆ ನಾಪತ್ತೆ, ಪೊಲೀಸ್ ಸಂಪರ್ಕಿಸಿ

Madhyama Bimba

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗೆ ರಾಷ್ಟ್ರೀಯ ಕೈಗಾರಿಕಾ ಪ್ರಶಸ್ತಿ

Madhyama Bimba

ಲಯನ್ಸ್ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ  ಮೂಡುಬಿದಿರೆ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More