ಮೂಡುಬಿದಿರೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗೆ ರಾಷ್ಟ್ರೀಯ ಕೈಗಾರಿಕಾ ಪ್ರಶಸ್ತಿ

ಡಿಜಿಟಲ್ ಮಾರ್ಕೆಟಿಂಗ್‌ ಅತ್ಯುತ್ತಮ ಅಭಿಯಾನಕ್ಕಾಗಿ ಸಿಐಐ (ಕಾನ್‌ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ) ಆಯೋಜಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಅಗ್ರ ಪ್ರಶಸ್ತಿಯನ್ನು ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮೈಂಡ್‌ ಫುಲ್ ಕನ್ಸಲ್ಟಿಂಗ್, ಮಂಗಳೂರು ಇದರ ಸಂಸ್ಥಾಪಕ ಸಂಜಯ್ ಭಟ್ ಅವರು ಪಡೆದುಕೊಂಡಿದ್ದಾರೆ.

ದೇಶದಾದ್ಯಂತ ನೋಂದಾಯಿತ 205 ಎಂಟ್ರಿಗಳ ಕಟ್ಟುನಿಟ್ಟಿನ ಮೌಲ್ಯಮಾಪನದ ನಂತರ, ಮೈಂಡ್‌ ಫುಲ್ ಕನ್ಸಲ್ಟಿಂಗ್‌ನ ಈ ಉಪಕ್ರಮವು ಭಾರತದ 33 ಅತಿ ಶ್ರೇಷ್ಠ ಕಾರ್ಯ ವಿಧಾನಗಳಲ್ಲಿ ಒಂದಾಗಿ ಆಯ್ಕೆಯಾಗಿದೆ. ಸ್ತನ ಕ್ಯಾನ್ಸರ್ ತಪಾಸಣೆಯ ಮೇಲೆ ಕೇಂದ್ರೀಕರಿಸಿದ ಈ ಅಭಿಯಾನವು, 1.56 ಕೋಟಿಗೂ ಅಧಿಕ ಭಾರತೀಯ ಮಹಿಳೆಯರಲ್ಲಿ ಜಾಗೃತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ, ಕಳೆದ 5 ವರ್ಷಗಳ ಅವಧಿಯಲ್ಲಿ ವೆಚ್ಚ ಇಳಿಸುತ್ತಾ ಪರಿಣಾಮ ಹೆಚ್ಚಿಸುವ ಅಪರೂಪದ ಸಾಧನೆಯನ್ನು ಈ ಉಪಕ್ರಮ ತೋರಿಸಿದೆ ಎಂದು ಸಂಜಯ್ ಭಟ್ ತಿಳಿಸಿದ್ದಾರೆ.

ನಮ್ಮ ಹಳೆ ವಿದ್ಯಾರ್ಥಿ ಸಂಜಯ್ ಭಟ್ ಅವರು ಸಾಮಾಜಿಕ ಹಿತಾಸಕ್ತಿ ಮತ್ತು ಉದ್ಯಮವಲಯಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ರಾಷ್ಟ್ರಮಟ್ಟದಲ್ಲಿ ಗೆದ್ದ ಈ ಸಾಧನೆ ನಮಗೆಲ್ಲ ಬಹಳ ಹೆಮ್ಮೆಯ ವಿಷಯ ಎಂದು, ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಮಣಿಪಾಲ ಮಾಹೆಯ ಪ್ರೊ. ಚಾನ್ಸಲರ್ ಮತ್ತು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಅಧ್ಯಕ್ಷರಾದ ಡಾ.. ಹೆಚ್. ಎಸ್ ಬಲ್ಲಾಳ್, ಶ್ರೀ ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Related posts

ಅರುಣ್ ಗೋವಿಯಸ್ ಇನ್ನಿಲ್ಲ

Madhyama Bimba

ಎಂಸಿಎಸ್ ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ.ರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ- ಪಿ.ಎಲ್. ಧರ್ಮ, ಸಂದೇಶ್ ಪಿ.ಜಿ.ಯವರಿಗೆ ಸನ್ಮಾನ

Madhyama Bimba

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More