ಕಾರ್ಕಳಹೆಬ್ರಿ

ಕಾರ್ಕಳ: ಮೋಟಾರ್ ಸೈಕಲ್‌ಗೆ ಸ್ಕೂಟರ್ ಡಿಕ್ಕಿ- ಗಾಯ

ಕಾರ್ಕಳ: ಹಿರ್ಗಾನ ಗ್ರಾಮದ ಮೀನು ಮಾರ್ಕೆಟ್ ಬಳಿ ಮೋಟಾರ್ ಸೈಕಲ್‌ಗೆ ಸ್ಕೂಟರ್ ಡಿಕ್ಕಿಯಾದ ಘಟನೆ ಮೇ. 01ರಂದು ನಡೆದಿದೆ.

ಶಶಿಕಾಂತ ಹಾಗೂ ಸುಮಿತ್ರರವರು ಮೋಟಾರ್ ಸೈಕಲ್‌ನಲ್ಲಿ ಹಿರ್ಗಾನದಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಕಾರ್ಕಳದಿಂದ ಹಿರ್ಗಾನ ಕಡೆಗೆ ಬರುತ್ತಿದ್ದ ಸ್ಕೂಟರ್ ಸವಾರ ಯಾವುದೇ ಸೂಚನೆಯನ್ನು ನೀಡದೆ ಒಮ್ಮೇಲೆ ಬಲಕ್ಕೆ ಚಲಾಯಿಸಿ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸುಮಿತ್ರರವರಿಗೆ ಮುಖ, ತಲೆಗೆ ರಕ್ತ ಗಾಯವಾಗಿ ಮಂಗಳೂರು ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಈದು -ನಾರಾವಿ ಪರಸ್ಪರ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಒಂದು ಲಕ್ಷ ರೂಪಾಯಿ ಸಹಾಯ ಧನ ಹಸ್ತಾಂತರ

Madhyama Bimba

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ

Madhyama Bimba

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More