ಕಾರ್ಕಳ

ಕ್ರೈಸ್ಟ್‌ಕಿಂಗ್: ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಾರ್ಕಳ: ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನವರು ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಛಾಂಪಿಯನ್‌ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾಳೆ.

ರಾಷ್ಟ್ರಮಟ್ಟದ ಪಂದ್ಯಾಟವು ಇದೇ ಡಿಸೆಂಬರ್ ತಿಂಗಳ 16 ರಿಂದ 21ರವರೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ ಪಿಲಾನಿಯಲ್ಲಿ ನಡೆಯಲಿದ್ದು ಇಲ್ಲಿ ವರುಣ ಶೆಟ್ಟಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ಜೋಡುರಸ್ತೆಯ ಕೊರಚೊಟ್ಟುವಿನ   ಪ್ರಭಾಕರ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.

Related posts

ಅರ್ಜುನಾಪುರದಲ್ಲಿ ವಿದ್ವಾನ್ ವೇ|| ಮೂ|| ಉಮೇಶ್ ಭಟ್ ಅವರಿಗೆ ಶನಿವಾರ ಸನ್ಮಾನ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮದ್ಯ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Madhyama Bimba

ಎಪ್ರಿಲ್‌ 05 ರಿಂದ 10:  ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರದಲ್ಲಿ ಆದಿಮುದ್ರೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More