ಹೆಬ್ರಿ

ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ- ಮೇ. 08ರಂದು ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ

ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ ಜಗಲ್‌ಗುಡ್ಡೆ ಇಲ್ಲಿಯ
ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ ಮೇ. 08 ಶುಕ್ರವಾರದಂದು ಜರಗಲಿದೆ.

ಅಂದು ಬೆಳಿಗ್ಗೆ 8.30ರಿಂದ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ನವಕ ಪ್ರಧಾನ ಹೋಮ, ಚಂಡಿಕಾಹೋಮ, ಗಂಟೆ ೧೧.೩೦ಕ್ಕೆ : ಪಂಚಾಮೃತ ಸಹಿತ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12.00 ಗಂಟೆಗೆ ಚಂಡಿಕಾ ಹೋಮದ ಪೂರ್ಣಾಹುತಿ, ತೀರ್ಥಪ್ರಸಾದ, ಮಧ್ಯಾಹ್ನ ಅನ್ನಪ್ರಸಾದ, ಮಧ್ಯಾಹ್ನ 12.30ಕ್ಕೆ 54 ವರ್ಷಗಳಿಂದ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ವೈದ್ಯರಾದ ಡಾ. ಎಸ್. ಪರಮೇಶ್ವರ್ ಉಡುಪ ಅವರಿಗೆ ಶ್ರೀ ಕ್ಷೇತ್ರದ ತಂತ್ರಿವೇರಣ್ಯನಾದ ವೇದಮೂರ್ತಿ ಗಿರೀಶ್ ಸೋಮಯಾಜಿ ಪಡುವಳ್ಳಿ ಇವರಿಂದ ಶ್ರೀ ದುರ್ಗಾ ಅನುಗ್ರಹ ಸನ್ಯಾನ ಪತ್ರದೊಂದಿಗೆ ಗೌರವಾರ್ಪಣೆ ನಡೆಯಲಿದೆ.

ಸಂಜೆ 6.00ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆರ್ಡಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.), ಕೊಂಜಾಡಿ ಹಾಗೂ ಶ್ರೀ ದುರ್ಗಾಂಬಾ ಭಜನಾ ಮಂಡಳಿ, ಅರಸಮ್ಮಕಾನು ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 9.30ಕ್ಕೆ ರಂಗಪೂಜೆ, ಸಂದರ್ಶನ ಸುತ್ತು ಬಲಿ, ಪ್ರಸಾದ ವಿತರಣೆ, ಅನ್ನಪ್ರಸಾದ, ರಾತ್ರಿ 11.00ರಿಂದ ಕಲ್ಲುಕುಟಿಗ ಮತ್ತು ಸತ್ಯದೇವತೆಗೆ ಸಿರಿ ಸಿಂಗಾರ ಕೋಲ ಸೇವೆ ಜರಗಲಿದೆ.

 

Related posts

ಪಡುಕುಡೂರು ಶಾಲೆ: ಚಿಗುರು ಇಕೋ ಕ್ಲಬ್ ಉದ್ಘಾಟನೆ

Madhyama Bimba

ಅಜೆಕಾರು: ನೇಮೊಟ್ಟು ದಿ| ಸಂಪಾವತಿ ಶೆಡ್ತಿಯವರ ಸ್ಮರಣಾರ್ಥ ಬಸ್ಸುತಂಗುದಾಣ ಉದ್ಘಾಟನೆ

Madhyama Bimba

ಕಾರ್ಕಳ: ಟ್ರಾಕ್ಟರ್‌ನಿಂದ ಬಿದ್ದು ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More