ಕಾರ್ಕಳಹೆಬ್ರಿ

ಅಜೆಕಾರು: ನೇಮೊಟ್ಟು ದಿ| ಸಂಪಾವತಿ ಶೆಡ್ತಿಯವರ ಸ್ಮರಣಾರ್ಥ ಬಸ್ಸುತಂಗುದಾಣ ಉದ್ಘಾಟನೆ

 

ಅಜೆಕಾರು ಪದ್ಮನಗರದ “ಜ್ಞಾನಸುಧಾ” ಆವರಣದಲ್ಲಿ ನೇಮೊಟ್ಟು ದಿವಂಗತ ಸಂಪಾವತಿ ಶೆಡ್ತಿಯವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಲಾದ ಬಸ್ಸುತಂಗುದಾಣದ ಉದ್ಘಾಟನಾ ಸಮಾರಂಭವು ಜ.2 ಶುಕ್ರವಾರ ನೆರವೇರಿತು.

ಕಾರ್ಯಕ್ರಮವನ್ನು ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಜೆಕಾರು ಶ್ರೀ ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ತಂದೆ ತಾಯಿಯನ್ನು ನೋಡಿಕೊಂಡವರಿಗೆ ಯಾವತ್ತೂ ಶ್ರೇಯಸ್ಸು ಉಂಟಾಗುತ್ತದೆ, ಆ ನಿಟ್ಟಿನಲ್ಲಿ ತಾಯಿಯ ಸವಿನೆನಪಿಗಾಗಿ ಅವರ ಪತಿ ಮತ್ತು ಮಕ್ಕಳು ಮಾಡಿರುವ ಈ ಕಾರ್ಯ ಒಂದು ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ,ಉದ್ಯಮಿಗಳು ಪ್ರಗತಿ ಗಣೇಶ್ ಟ್ರೇಡ್ ಸೆಂಟರ್ ಅಜೆಕಾರು ಸಂಸ್ಥೆಯ ಸುಜಯ್ ಶೆಟ್ಟಿ, ನಂದಕುಮಾರ್ ಹೆಗ್ಡೆ , ಸಂಪಾವತಿ ಶೆಡ್ತಿ ಕುಟುಂಬಿಕರು, ಅಜೆಕಾರು ಭಾಗದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಆನ್‌ಲೈನ್ ವಂಚನೆ: ರೂ 2,19,500 ಕಳೆದುಕೊಂಡ ನಾಡ್ಪಾಲಿನ ವ್ಯಕ್ತಿ

Madhyama Bimba

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯ

Madhyama Bimba

ಗೃಹ ಲಕ್ಷ್ಮೀಗೆ ಸಚಿವೆ ಲಕ್ಷ್ಮೀಯೇ ಕಂಟಕ: ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More