ಕಾರ್ಕಳ

ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್. ಟಿ. ಎ.) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಎರಡನೆಯ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಸಂಸ್ಥೆ ಅತ್ಯುತ್ತಮ ಫಲಿತಾಂಶವನ್ನು ಪಡೆದು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ನಾಗದೇವ್ ಎಂ.ಜಿ. ಬಿ.ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬಿ. ಪ್ಲಾನಿಂಗ್ ವಿಭಾಗದಲ್ಲಿ  ನಾಗದೇವ್ ಎಂ.ಜಿ 99.9762662, ಸುಕ್ಷಿತ್ ಗಿರೀಶ್ ಗೌಡ 99.7769023, ನಮಿತ್ ಕೃಷ್ಣಮೂರ್ತಿ ಹೆಗಡೆ 99.4570078,  ವಿಶ್ವೇಶ್ ಎನ್.ಹೆಚ್.99.3484094, ನಿಶಾಂತ್ ಹೊನ್ನಾವರ್ 99.3164686, ಅನಿರುಧ್ ಉಪಾಧ್ಯಾಯ 98.8948512, ಅಭಿರಾಮ್ ಭಟ್ ಜಿ.ಪಿ.98.3718612, ಉಲ್ಲಾಸ್ ವೈ ಪಾಟೀಲ್ 98.2560368, ದಿಶಾಂತ್ ಎಂ.98.2152181, ವೃಷಬ್ ಮಂಜುನಾಥ್ ಬೆನ್ನಿ 98.1666028, ಸಂವಿತ್ ಅಮಿತ್ ಗೋಕರ್ಣ 98.1107894, ನಿನಾದ್ ರಾಜೇಶ್ ನಾಯಕ್ 98.0490815 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.

99 ಪರ್ಸೆಂಟೈಲ್ ಗಿಂತ ಅಧಿಕ 05 ಮಂದಿ, 98 ಪರ್ಸೆಂಟೈಲ್ ಗಿಂತ ಅಧಿಕ 12 ಮಂದಿ, 97 ಪರ್ಸೆಂಟೈಲ್ ಗಿಂತ ಅಧಿಕ 16 ಮಂದಿ, 95 ಪರ್ಸೆಂಟೈಲ್ ಗಿಂತ ಅಧಿಕ 22 ಮಂದಿ 90 ಪರ್ಸೆಂಟೈಲ್ ಗಿಂತ ಅಧಿಕ 31 ಮಂದಿ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ಬಿ.ಆರ್ಕ್ ವಿಭಾಗದಲ್ಲಿ ನಾಗದೇವ್ ಎಂ.ಜಿ. ದೇಶಕ್ಕೆ ಐದನೇ ರ್‍ಯಾಂಕ್ ಪಡೆದು, ಗಣಿತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಪಡೆದು ಒಟ್ಟಾರೆಯಾಗಿ 99.8894999 ಪರ್ಸೆಂಟೈಲ್, ಅನಿರುಧ್ ಉಪಾಧ್ಯಾಯ 98.296243, ವಿಶ್ವೇಶ್ ಎನ್ ಹೆಚ್ 98.1317778 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.

99 ಪರ್ಸೆಂಟೈಲ್ ಗಿಂತ 01, 98 ಪರ್ಸೆಂಟೈಲ್ ಗಿಂತ ಅಧಿಕ 03, 97 ಪರ್ಸೆಂಟೈಲ್ ಗಿಂತ ಅಧಿಕ 11, 95 ಪರ್ಸೆಂಟೈಲ್ ಗಿಂತ ಅಧಿಕ 20, 90ಪರ್ಸೆಂಟೈಲ್ ಗಿಂತ ಅಧಿಕ 40ಮಂದಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾಲೇಜಿನ ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Related posts

ಗಾಂಧಿ ಜಯಂತಿ ಪ್ರಯುಕ್ತ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ

Madhyama Bimba

ಶಿವಪುರ ಶಂಕರದೇವ ದೇವಸ್ಥಾನದ ಬ್ರಹ್ಮಕಲಶೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಭಾರತ ವಾಲಿಬಾಲ್ ತಂಡದ ನಾಯಕಿಯಾಗಿ ಕಾರ್ಕಳದ ಶಗುನ್ ಎಸ್ ವರ್ಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More