ಕಾರ್ಕಳ

ಗಾಂಧಿ ಜಯಂತಿ ಪ್ರಯುಕ್ತ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ

ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಜಾರ್ಕಳದಿಂದ ಕುಕ್ಕುಂದೂರು ಪಿಲಿಚಂಡಿ ಸ್ಥಾನದ ವರೆಗೆ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದಾರ್ಥಿಗಳಿಂದ ಸ್ವಚ್ಚತಾ ಅಭಿಯಾನ ಅ.2ರಂದು ಜರಗಿತು.


ಈ ಸಂದರ್ಭದಲ್ಲಿ ಕುಕ್ಕುಂದೂರಿನ ಉದ್ಯಮಿಗಳಾದ ತ್ರಿವಿಕ್ರಮ ಕಿಣಿ ಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು.


ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಕುಕ್ಕುಂದೂರು ಪಂಚಾಯತ್ ಸದಸ್ಯರಾದ ರೆಹಮತುಲ್ಲಾ ಹಾಗೂ ಉದ್ಯಮಿಗಳಾದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.


ಸ್ವಚ್ಚ್ಚತಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು, ಉಪ ಪ್ರಾಂಶುಪಾಲರಾದ ಸಾಹಿತ್ಯ , ಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ವಾಣಿ ಕೆ ಹಾಗೂ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ವಹಣೆಯನ್ನು ಆಂಗ್ಲ ಭಾಷಾ ಉಪನ್ಯಾಸಕಿ ದರ್ಶಿನಿ ನೆರವೇರಿಸಿದರು.

 

Related posts

ಶಿವಪುರ ಶ್ರೀಶಂಕರದೇವ ದೇವಸ್ಥಾನ: ನೂತನ ಧ್ವಜಮರಕ್ಕೆ ತೈಲಾಧಿವಾಸ ಕಾರ್ಯ

Madhyama Bimba

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

Madhyama Bimba

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯದ ಪದಾಧಿಕಾರಿಗಳ ಪದಗ್ರಹಣ – ಫೋಟೋಗ್ರಫಿ ಸುಂದರ ಕಲೆ : ಮುನಿಯಾಲು ದಿನೇಶ ಪೈ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More