ಕಾರ್ಕಳಮೂಡುಬಿದಿರೆಹೆಬ್ರಿ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ಕೆ. ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ.

ಸಂಘದ ಸದಸ್ಯರ ಮಕ್ಕಳಿಗೆ 2025 -26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಹಾಗೂ ಅದಕ್ಕಿಂತ ಹೆಚ್ಚು ಅಂಕ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಮತ್ತು
2025-26ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿಪಿ.ಯು.ಸಿ ಉತ್ತೀರ್ಣರಾಗಿ, 2026-27ನೇ ಶೈಕ್ಷಣಿಕ ಸಾಲಿನಲ್ಲಿ

1. ಎಂ.ಬಿ.ಬಿ.ಎಸ್/ಬಿಡಿಎಸ್/ಆಯುಷ್/ವೆಟರ್ನರಿ ಮುಂತಾದ ವೈದ್ಯಕೀಯ ಶಿಕ್ಷಣ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಷ್ಟ್ರೀಯ ನೀಟ್ ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ ಅಡ್ಮಿಷನ್ ಪಡೆದ ವಿದ್ಯಾರ್ಥಿಗಳಿಗೆ,
2. ಇಂಜಿನಿಯರಿಂಗ್ ಪದವಿ/ಸ್ನಾತಕ್ಕೋತ್ತರ ವ್ಯಾಸಂಗವನ್ನು ರಾಜ್ಯ ಮತ್ತು ರಾಷ್ಟ್ರೀಯ ಪ್ರವೇಶ ಪರೀಕ್ಷೆ (ಸಿಇಟಿ/ಜೆಇಇ) ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ ಅಡ್ಮಿಷನ್ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಪದವಿಯ ವ್ಯಾಸಂಗವನ್ನು ರಾಜ್ಯ (ಸಿಇಟಿ) ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ ಅಡ್ಮಿಷನ್ ಪಡೆದ ವಿದ್ಯಾರ್ಥಿಗಳಿಗೆ,
3. ಅಗ್ರಿಕಲ್ಚರಲ್/ಫಿಶರೀಶ್ ಮತ್ತು ವೆಟರ್ನರಿ ಪದವಿ/ಸ್ನಾತಕ್ಕೋತ್ತರ ಪದವಿ ರಾಜ್ಯ ಸಿಇಟಿ ಪರೀಕ್ಷೆ ಮುಖೇನ ಸರ್ಕಾರಿ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ ಅಡ್ಮಿಷನ್ ಪಡೆದ ವಿದ್ಯಾರ್ಥಿಗಳಿಗೆ,
4. ಕಾನೂನು ಪದವಿ / ಸ್ನಾತಕೋತ್ತರ ವ್ಯಾಸಂಗವನ್ನು ಸಿಎಲ್‌ಇಟಿ ಪರೀಕ್ಷೆ ಮುಖೇನ ನ್ಯಾಷನಲ್ ಲಾ ಕಾಲೇಜಿನಲ್ಲಿ ಮೆರಿಟ್ ಸೀಟ್‌ನಲ್ಲಿ ಅಡ್ಮಿಷನ್ ಪಡೆದ ವಿದ್ಯಾರ್ಥಿಗಳಿಗೆ,
5. ಎಂ.ಎ/ಎಂ.ಕಾಂ./ಎಂ.ಬಿ.ಎ/ಎಂ.ಎಸ್.ಎಸ್ಸಿ/ಎಂ.ಇಡಿ ಪದವಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ,
5. ಪಾಲಿಟೆಕ್ನಿಕ್ ಡಿಪ್ಲೊಮಾ /ಐ.ಟಿ.ಐ/ಬಿ.ಪಿ.ಇ.ಡಿ/ಬಿ.ಇ.ಡಿ./ಡಿ.ಇ.ಡಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ,
7. ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಭಾ ಪುರಸ್ಕಾರದ ಅರ್ಜಿಗಳು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಮತ್ತು ಸಂಘದ ಅಧಿಕೃತ ವೆಬ್‌ಸೈಟ್  http://ramakrishnacredit.com/ ನಲ್ಲಿ ಲಭ್ಯವಿದ್ದು ಜೂನ್ 15, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಅನಂತ ಕೃಷ್ಣರಾವ್ ಅವಿರೋಧ ಆಯ್ಕೆ

Madhyama Bimba

ರೈತರಿಗೆ ಅನ್ಯಾಯ ಮಾಡಿದರೆ ಸ್ಟೆರ್ ಲೈಟ್ ಆಂದ್ರಕ್ಕೆ ವಾಪಾಸ್ : ಮಿಥುನ್ ರೈ ಎಚ್ಚರಿಕೆ

Madhyama Bimba

ಡಾ| ಅರುಣ್ ಉಳ್ಳಾಲ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ: ರಮಿತಾ ಶೈಲೇಂದ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More