ಕಾರ್ಕಳಹೆಬ್ರಿ

ಶಿವಪುರ ಎಲಿಕೋಡು ಮಠ: ಶಿಲಾಮಯ ಗರ್ಭಗೃಹ ಸಮರ್ಪಣೆ – ಹೊರೆಕಾಣಿಕೆ ಸಮರ್ಪಣೆ

ಶಿವಪುರ. : ಹೆಬ್ರಿ ತಾಲ್ಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನ:ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಆರಂಭಗೊಂಡಿದೆ.

ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶುಕ್ರವಾರ ಸಂಜೆ ಮುಖಂಡರಾದ ಬೈಕಾಡಿ ಮಂಜುನಾಥ ರಾವ್ ಎಲಿಕೋಡು ನೇತ್ರತ್ವದಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ ಅವರು ಶಿವಪುರ ಪೇಟೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೆರವಣಿಗೆಯಲ್ಲಿ ಎಲಿಕೋಡು ಮಠಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಶಿವಪುರದ ಭಜನಾ ತಂಡ ಮತ್ತು ವಾಧ್ಯ ಘೋಷಗಳ ತಂಡ ಮೆರವಣಿಗೆಗೆ ಮೆರುಗು ನೀಡಿತು.

ಬಳಿಕ ಎಲಿಕೋಡು ಮಠದಲ್ಲಿ ಅರ್ಚಕ ವೇದಮೂರ್ತಿ ವಾಸುದೇವಾ ಭಟ್ ಶಿವಪುರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸಲ್ಲಿಸಿ ಬ್ರಹ್ಮಕಲಶಾಭಿಷೇಕದ ವಿಧಿವಿಧಾನಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಲಿಕೋಡು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ, ಶ್ರೀನಾಥ್ ಎಲಿಕೋಡು, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್, ವಿವಿಧ ಪ್ರಮುಖರಾದ ಸುರೇಶ ಶೆಟ್ಟಿ ಶಿವಪುರ, ಶ್ರೀನಿವಾಸ ಹೆಬ್ಬಾರ್ ಶಿವಪುರ, ಸಂತೋಷ ಕುಮಾರ್ ಶೆಟ್ಟಿ ನಾಯರಕೋಡು, ಶಂಕರನಾರಾಯಣ ಕೊಡಂಚ, ಸುನಂದ ಕುಲಾಲ್ ಶಿವಪುರ, ರಾಘವೇಂದ್ರ ಪ್ರಭು ಶಿವಪುರ, ಎಲಿಕೋಡು ಮಠದ ಪ್ರಮುಖರು, ವಿವಿಧ ಪ್ರಮುಖರು, ಗಣ್ಯರು, ಅರ್ಚಕ ವೃಂದದವರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Related posts

ಕರ್ನಾಟಕದ ವಿಧಾನ ಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯ ಭಗ್ನ: ಸುನೀಲ್ ಕುಮಾರ್

Madhyama Bimba

ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳದಲ್ಲಿ ಚಿಲಿಪಿಲಿ-2026

Madhyama Bimba

ಶಿವಪುರ ಯಳಗೋಳಿಯಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More