Blog

ಕೌಡೂರು ಯುವಸಂಗಮ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ

ಬೈಲೂರು: ಯುವಸಂಗಮ (ರಿ.) ಕೌಡೂರು ಇವರ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಹೃದಯ ತಪಾಸಣೆ (ಇಸಿಜಿ), ಉಚಿತ ಮಂಡಿನೋವು ತಪಾಸಣೆ, ಉಚಿತ ಚರ್ಮರೋಗ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 21ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಿ ಮಾತನಾಡಿ ಈ ಭಾಗದಲ್ಲಿ ಸಂಘವು ಜನರ ಅಗತ್ಯತೆಗೆ ಅನುಗುಣವಾಗಿ ಆರೋಗ್ಯ ಸೇವಾ ಶಿಬಿರವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದರೊಂದಿಗೆ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಸಿ ಆ ಮೂಲಕ ಸಮಾಜ ಸೇವೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಈ ಮನೆಗೆ ಮುಂದಿನ ಹಂತದಲ್ಲಿ ಸಹಾಯ ಬೇಕಿದ್ದಲ್ಲಿ ತನ್ನಿಂದಾದ ಸಹಕಾರ ನೀಡುವುದಾಗಿ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್. ಸುಧೀರ್ ಹೆಗ್ಡೆ ನಾಯರಬೆಟ್ಟು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಾಣೂರು ರಾಜೇಶ್ವರಿ ಎಜ್ಯುಕೇಶನ್ ಫೌಂಡೇಶನ್‌ನ ದೇವಿಪ್ರಸಾದ್ ಶೆಟ್ಟಿ, ಪಣಂಬೂರು ಎಸಿಪಿ ಶ್ರೀಕಾಂತ್ ಕೆ., ಬೈಲೂರು ಗುರುಕೃಪಾ ನಸಿಂಗ್ ಹೋಮ್‌ನ ಡಾ. ರಾಮಕೃಷ್ಣ ನಾಯಕ್, ಆರೂರ್‍ಸ್ ನರ್ಸಿಂಗ್ ಹೋಮ್‌ನ ಡಾ. ಶಶಿಕಿರಣ್ ಆಚಾರ್, ಜಿಲ್ಲಾ ಪಂಚಾಯತ್ ನಿಟಕಪೂರ್ವ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಹರೀಶ್ ಶೆಟ್ಟಿ ಸೇರಿಗಾರಬೆಟ್ಟು,
ಪ್ರವೀಶ್ ಶೆಟ್ಟಿ ಸೇರಿಗಾರಬೆಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆ, ಉಡುಪಿಯ ಹೈಟೆಕ್ ಮತ್ತು ಮಿತ್ರ ಆಸ್ಪತ್ರೆಯ ಖ್ಯಾತ ಹೃದಯ ತಜ್ಞರಾದ ಡಾ. ಅನೂಪ್ ಕೆ. ಶೆಟ್ಟಿ, ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು ಇಲ್ಲಿಯ ಎಲುಬು ಮತ್ತು ಕೀಲುರೋಗ ತಜ್ಞ ವೈದ್ಯರಾದ ಡಾ. ಸುಧೀಂದ್ರ ಕಾರ್ನಾಡ್, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಖ್ಯಾತ ಚರ್ಮರೋಗ ತಜ್ಞರಾದ ಡಾ. ಯಶೋಧರ ಕಾರ್ಕಳ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಂತ್ ಹೆಗ್ಡೆ, ಹೆಬ್ರಿ ಹೆಲ್ತ್‌ಕೇರ್ ಸೆಂಟರ್‌ನ ಕನ್ಸಲ್ಟೆಂಟ್ ಪಿಸಿಯೋಥೆರಫಿಸ್ಟ್ ಡಾ. ನಿಶಾ ಶೆಟ್ಟಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಒಟ್ಟು 27 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 4 ಮಕ್ಕಳಿಗೆ ಶಾಲಾ ಶುಲ್ಕ, ಈರ್ವರಿಗೆ ಸಹಾಯಧನ ನೀಡಲಾಯಿತು.

ಒಟ್ಟು 458 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಇಸಿಜಿ ಪರೀಕ್ಷೆಯನ್ನು 296 ಮಂದಿ, ಮಂಡಿ ನೋವಿನ ಬಗ್ಗೆ 184 ಮಂದಿಗೆ ಎಕ್ಸ್ ರೇ ಮಾಡಿಸಲಾಯಿತು.


ಸಾರ್ವಜನಿಕ ಉಚಿತ ಆರೋಗ್ಯ ಶಿಬಿರದಲ್ಲಿ ಮಂಡಿ ನೋವು ಸಮಸ್ಯೆಯ ಬಗ್ಗೆ ಎಕ್ಸ್ ರೇ, ಪಿಸಿಯೋಥೆರಫಿ ಮಾಡಿರುವುದು ವಿಶೇಷವಾಗಿತ್ತು.

ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಪ್ರಸ್ತಾವನೆಗೈದರು. ಸಮಿತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ನಾಗೇಶ್ ಪೂಜಾರಿ ವಂದಿಸಿದರು ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Related posts

ವಾಲ್ಪಾಡಿಯಲ್ಲಿ ಶವ ಪತ್ತೆ

Madhyama Bimba

ರತನ್ ಟಾಟಾ ಶ್ರದ್ಧಾಂಜಲಿ ಸಭೆ

Madhyama Bimba

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More