ಕಾರ್ಕಳಹೆಬ್ರಿ

ಮೇ 17ರಂದು ಆಳ್ವಾಸ್ ಕ್ಯಾಂಪಸ್ ನಲ್ಲಿ ನಾದ ಧ್ಯಾನ- ಸಾರ್ವಜನಿಕರಿಗಾಗಿ ಉಚಿತ ಪ್ರವೇಶ

ಮೂಡುಬಿದಿರೆ: ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್‌ಮೆಂಟ್ (ಪಿಎಸ್‌ಎಸ್‌ಎಂ), ಬೆಂಗಳೂರಿನ ಪಿರಮಿಡ್ ವರ್ಲ್ಡ್ ಫೌಂಡೇಶನ್ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ನಾಡ ಧ್ಯಾನ ಚಕ್ರ (ಯಜ್ಞ)-8 ಕಾರ್ಯಕ್ರಮ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿರುವ ಕೃಷಿ ಸಿರಿ ಸಭಾಂಗಣದಲ್ಲಿ ಮೇ 17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ.

ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಪಿಎಸ್‌ಎಸ್‌ಎಂ ಸಂಸ್ಥಾಪಕ ಬ್ರಹ್ಮರ್ಷಿ ಪತ್ರೀಜಿ ಮಾರ್ಗದರ್ಶನದಂತೆ ರೂಪುಗೊಂಡಿದೆ. ಬೆಳಿಗ್ಗೆ 8:30ಕ್ಕೆ ಉದ್ಘಾಟನೆ ನೆರವೇರಲಿದ್ದು, ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸತತ ಮೂರು ಗಂಟೆಗಳ ಕಾಲ ನಾಡ ಧ್ಯಾನ, ಆನಾಪಾನಸತಿ ಧ್ಯಾನದ ಬಗ್ಗೆ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಸಾತ್ವಿಕ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಡಾ.ಅಯ್ಯಪ್ಪ ಪಿಂಡಿಯವರು ಮಾಹಿತಿ ನೀಡಿ, ಮನಸ್ಸಿನ ಶಾಂತಿ, ಒತ್ತಡ ಮುಕ್ತ ಜೀವನ ಹಾಗೂ ಆರೋಗ್ಯ ಸುಧಾರಣೆಯ ಕುರಿತುಮಾಹಿತಿ ನೀಡಿದರು. ಆಧುನಿಕ ಜೀವನಶೈಲಿಯಲ್ಲಿ ಯೋಗ ಮತ್ತು ಧ್ಯಾನ ಅತೀ ಅಗತ್ಯವಾಗಿದೆ ಎಂದರು. ಈಗಾಗಲೇ ತುಮಕೂರು, ಬಳ್ಳಾರಿ, ಹಾಸನ, ಚನ್ನರಾಯಪಟ್ಟಣ ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಎಂಟು ಉಚಿತ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಬಾರಿ ಸುಮಾರು 5,000 ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಶಾಸ್ತ್ರೀಯ ನಾದದೊಂದಿಗಿನ ಧ್ಯಾನವು ಮಾನಸಿಕ ನೆಮ್ಮದಿಗೆ ಪೂರಕವಾಗಲಿದೆ ಎಂದು ಅವರು ವಿವರಿಸಿದರು. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ ಆದಿಶಂಕರಾಚಾರ್ಯ ಹೀಲಿಂಗ್ ಪಿರಮಿಡ್ ಧ್ಯಾನ ಕೇಂದ್ರದ 96112 68941 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರೇಖಾ ರವಿದಾಸ್ ಶೆಣೈ, ರೂಪಾ ಶಶಿಕಾಂತ್ ನಾಯಕ್ ಉಪಸ್ಥಿತರಿದ್ದರು.
 

Related posts

ಕಾರ್ಕಳ: ಬ್ಯಾರಿಕೇಡ್ ಹಸ್ತಾಂತರ

Madhyama Bimba

ಸುಂದರ ಕೋಟ್ಯಾನ್ ಪಂಜಿಕುಡೇಲು ನಿಧನ

Madhyama Bimba

ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಕಾರ್ಯಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More