ಕಾರ್ಕಳ: ಕಲ್ಯಾ ಗ್ರಾಮದ ಹಾಳೆಕಟ್ಟೆ ಎಂಬಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದವರ ಮೇಲೆ ಜೂ. 27 ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಟಿಪ್ಪರ್ ಚಾಲಕ ಸಂಜೀವ ಎ, ಮಾಲಕ ಸಂತೋಷ್ ಕುಮಾರ್, ಸಂತೋಷ್, ಹರೀಶ್‌ರವರು ಸಂಘಟಿತರಾಗಿ ಬೋಳ ಪದವು ಎಂಬಲ್ಲಿಂದ ರೂ. 10,500/- ಮೌಲ್ಯದ ಕೆಂಪು ಕಲ್ಲನ್ನು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನ ಮಾಡಿ ಜೋಡುರಸ್ತೆಗೆ ಟಿಪ್ಪರ್‌ನಲ್ಲಿ ಸಾಗಾಟ ಮಾಡುತ್ತಿದ್ದರು
