Blog

ಸೈಬರ್ ವಂಚಕನಿಂದ ಕಾರ್ಕಳದ ಸ್ವಯಂ ಟೈಮ್ಸ್ ಚಾನೆಲ್ ಹ್ಯಾಕ್

ಕಳೆದ 5 ವರ್ಷಗಳ ಹಿಂದೆ ಕಾರ್ಕಳದಲ್ಲಿ ಆರಂಭಗೊಂಡು ಮನೆ ಮಾತಾಗಿದ್ದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸೈಬರ್ ವಂಚಕನೊಬ್ಬ ಮೇ 20ರ ರಾತ್ರಿ ಹ್ಯಾಕ್ ಮಾಡಿರುವ ಘಟನೆ ನಡೆದಿದೆ..

ಹ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಯೂ ಟ್ಯೂಬ್ ನಿಂದ ಸಕಾಲದಲ್ಲಿ ಬಂದ ನೋಟಿಫಿಕೇಶನ್ ನಿಂದ ಚಾನೆಲ್ ನ್ನೇ ಹಾಳು ಮಾಡುವ ನಿಟ್ಟಿನಲ್ಲಿ ಆಗುತ್ತಿದ್ದ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ.

🔴ಘಟನೆಯ ವಿವರ

———————–

ಕಾರ್ಕಳದ ಸ್ವಯಂ ಟೈಮ್ ತನ್ನದೇ ಆದ ವಿಶಿಷ್ಟ, ವೈವಿಧ್ಯಮಯ, ಬದ್ಧತೆಯ ವರದಿಯೊಂದಿಗೆ ಎಲ್ಲರ ಮನೆಮಾತಾಗಿ ರೂಪುಗೊಂಡಿತ್ತು. ಅತ್ಯಲ್ಪ ಅವಧಿಯಲ್ಲಿ ಸುಮಾರು 88 ಸಾವಿರಕ್ಕೂ  ಮಿಕ್ಕಿ ಚಂದದಾರರನ್ನು ಹೊಂದಿದ್ದ ಸ್ವಯಂ ಟೈಮ್ಸ್ ತನ್ನದೇ ಆದ ಕಂಟೆಂಟ್ ಮೂಲಕ ಚಂದಾದಾರರ ಮನದಾಳದಲ್ಲಿ ಉಳಿಯುವಂತೆ ಮಾಡಿದೆ. ಆದರೆ ಮೇ 20ರಂದು ತಡ ರಾತ್ರಿ ಸೈಬರ್ ವಂಚಕನೊಬ್ಬನಿಂದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸಂಪೂರ್ಣವಾಗಿ ಹ್ಯಾಕ್ ಮಾಡಿ ಅದರ ಪಾಸ್ವರ್ಡ್, ಇಮೇಲ್ ಐಡಿ, ಫೋನ್ ನಂಬರ್ ಬದಲಾಯಿಸಿ ಅದರ ಸಂಪೂರ್ಣ ಸ್ವಾಯತ್ತತೆಯನ್ನು ಆತನ ವಶಕ್ಕೆ ಪಡೆದುಕೊಂಡಿದ್ದ. ಆದರೆ ವಿಶ್ವಾಸ, ನಿಸ್ವಾರ್ಥದ ಸೇವೆಯ ದುಡಿಮೆಯ ಫಲವೆಂಬಂತೆ ಹ್ಯಾಕರ್ ಮಾಡಿದ ಸ್ವಯಂ ಟೈಮ್ಸ್ ಚಾನಲನ್ನು ಮತ್ತೆ ತನ್ನ ಸುಪರ್ದಿಗೆ ಪಡೆಯುವಲ್ಲಿ  ಸ್ವಯಂ ಟೈಮ್ಸ್ ಬಳಗದ ಐ ಟಿ ಸೆಲ್  ಬಳಗ ಯಶಸ್ವಿಯಾಗಿದೆ.  ಹ್ಯಾಕ್ ಆಗಿರುವ  ಮಾಹಿತಿಯನ್ನು ಸೈಬರ್ ಕ್ರೈಂ ಗೆ ನೀಡಲಾಗಿದೆ

ಮೇ 21 ರಂದು ಬೆಳಿಗ್ಗೆ ಮತ್ತೊಮ್ಮೆ ಹ್ಯಾಕ್ ಮಾಡಲು ಪ್ರಯತ್ನಿಸಿದ್ದು ಇದು ಮಾತ್ರ ಅಸಾಧ್ಯವಾಗಿಧೆ. ಇದರಿಂದ ಹ್ಯಾಕರ್ ನಿರಾಸೆಗೆ ಒಳಗಾಗಿರಬಹುದಾಗಿದೆ.

ನೀವು ಯು ಟ್ಯೂಬ್ ನಲ್ಲಿ ನ್ಯೂಸ್ ಚಾನೆಲ್ ಅಥವಾ ಇನ್ಯಾವುದೇ ಡಿಜಿಟಲ್ ಚಾನೆಲ್ ಹೊಂದಿದ್ದರೆ ತಕ್ಷಣ ಈ ಬಗ್ಗೆ ಜಾಗರುಕರಾಗುವಂತೆ ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯ ಪ್ರಕಟಣೆ ತಿಳಿಸಿದೆ

Related posts

ಶಗುನ್ ಎಸ್ ವರ್ಮ ಹೆಗ್ಡೆಯವರಿಗೆ ಕಾರ್ಕಳ ಜೈನ ಮಠದಿಂದ ಸನ್ಮಾನ

Madhyama Bimba

ವಿಲಾಸ್ ಕುಮಾರ್ ನಿಟ್ಟೆ ಅವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಪ್ರಶಸ್ತಿ

Madhyama Bimba

ಶಾಸಕಿ ಭಾಗೀರಥಿ ಮುರುಳ್ಯರ ಮೇಲೆ ಫೇಸ್ಬುಕ್ ನಲ್ಲಿ ಅವಹೇಳನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More