Blog

ವಿಲಾಸ್ ಕುಮಾರ್ ನಿಟ್ಟೆ ಅವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಪ್ರಶಸ್ತಿ


ಕಾರ್ಕಳ: ವಿಲಾಸ್ ಕುಮಾರ್ ನಿಟ್ಟೆ ಅವರ “ಆಯೆ ಆನ್‌ಮಗೆ” ತುಳು ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ.
ತುಳು ಕೂಟ ಕುಡ್ಲದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಈ ನಾಟಕ ಪ್ರಶಸ್ತಿ ಸ್ಪರ್ಧೆಯಲ್ಲಿ “ಆಯೆ ಆನ್ ಮಗೆ” ಎಂಬ ತುಳು ನಾಟಕ ಪ್ರತಿಯು ದ್ವಿತೀಯ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಗೆದ್ದುಕೊಂಡಿದೆ.
ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವಿಲಾಸ್ ಕುಮಾರ್ ನಿಟ್ಟೆ ಅವರು, ಗುತ್ತುದ ಗುರ್ಕಾರೆ, ಮುತೈಸಿ ಮದ್ಮಲ್, ತೆಲಿಕೆದ ನಲಿಕೆ, ಗಗ್ಗರ, ಅಲೆಗೇಪ ಮದ್ಮೆ ?, ಮಾತೆರ್ಲ ಬರೋಡು, ಕಂಬುಳದ ನಡುಟೊಂಜಿ ಕಥೆ, ತಮ್ಮನ, ಪನರೆ ಧೈರ್ಯಜ್ಜಿ, ಪನಂದೆ ಪೊಯೆರ್, ಬರೆಪುನಾಯೆ ಬರೆತ್‌ಜೆ ಮುಂತಾದ ಒಟ್ಟು ೨೦ಕ್ಕೂ ಹೆಚ್ಚು ತುಳು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಅವರ ಒಟ್ಟು ನಾಲ್ಕು ತುಳು ನಾಟಕಗಳು ಈ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಬಾಜನವಾಗಿದೆ.

ನಿಟ್ಟೆ ಗ್ರಾಮದ ಅತ್ತೂರು ಬಲಿಪಗುತ್ತು ಪ್ರೇಮ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ದಂಪತಿಯ ಪುತ್ರರಾಗಿರುವ ಅವರು, ಪ್ರಸ್ತುತ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಬೇಕಾಗಿದ್ದಾರೆ

Madhyama Bimba

ಮುಳ್ಕಾಡು ಸರಕಾರಿ ಶಾಲೆಯಲ್ಲಿ ಕೊಠಡಿಗಳಿಗೆ ಶಿಲಾನ್ಯಾಸ

Madhyama Bimba

ಅಂತರಾಷ್ಟ್ರೀಯ ಓಪನ್ ಚಾಂಪಿಯನ್ ಶಿಪ್ ನಲ್ಲಿ ರಾಜೇಶ್ ಶೆಟ್ಟಿಗೆ ತ್ರಿವಳಿ ಪದಕ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More