ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ಪದಗ್ರಹಣ ಸಮಾರಂಭ

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ಪದಗ್ರಹಣ ಸಮಾರಂಭವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆಯಲ್ಲಿ ಜರಗಿತು.


ವಲಯ ಸೇನಾನಿ ರೊ. ಕೃಷ್ಣ ಪ್ರಸಾದ್‌ರವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರ್ಯಂತೋಕ್ಲು ಶಿರ್ಲಾಲು ಇಲ್ಲಿನ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಪುಸ್ತಕಗಳನ್ನು ಹಸ್ತಾಂತರಿಸಿ ಸಂದೇಶ ಭಾಷಣ ನೀಡಿದರು.

ಈ ಸಂದರ್ಭದಲ್ಲಿ ರೊ. ಸುರೇಶ್ ನಾಯಕ್‌ರವರ ಸಂಪಾದಕೀಯದಲ್ಲಿ ರೋಟರಿ ಕ್ಲಬ್‌ನ ಬುಲೆಟಿನ್ ‘ಲೋಕಾಹಿತಮ್’ ನ್ನು ಸಹಾಯಕ ಗವರ್ನರ್ ರೊ. ಸುರೇಶ್ ನಾಯಕ್ ಬಿಡುಗಡೆಗೊಳಿಸಿ ಸಾಂದರ್ಭಿಕವಾಗಿ ಮಾತಾಡಿದರು.


ಕ್ಲಬ್‌ನ ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್‌ರವರು ರೋಟರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಕ್ಲಬ್‌ನ ಸದಸ್ಯರ ಮಕ್ಕಳನ್ನು ಕ್ಲಬ್‌ನ ಪರವಾಗಿ ಗೌರವಿಸಿದರು.

ಆಂಶ್ ಅಶೋಕ್ ಸಾಲ್ಯಾನ್ ಹೆರ್ಮುಂಡೆ ಮತ್ತು ಅನನ್ಯ ಕಾರ್ಕಳ ಈರ್ವರು ವಿದ್ಯಾರ್ಥಿಗಳಿಗೆ ರೊ.ಮಂಜುನಾಥ್ ಹೆಗ್ಡೆ, ರೊ. ಪ್ರಶಾಂತ್ ಬೆಳಿರಾಯ ಮತ್ತು ರೊ.ಚಿರಾಗ್ ರಾವ್ ನೀಡಿದ ವಿದ್ಯಾರ್ಥಿ ವೇತನವನ್ನು ಮುಖ್ಯ ಅತಿಥಿಗಳಾದ ರೊ. ಸಂದೀಪ್ ರಾವ್ ಇಡ್ಯರವರು ಹಸ್ತಾಂತರಿಸಿದರು.

ಪಡಿಬೆಟ್ಟು ಅಂಗನವಾಡಿ ಶಾಲೆಗೆ ಪೀಠೋಪಕರಣಗಳನ್ನು ಕ್ಲಬ್‌ನ ಪರವಾಗಿ ನೀಡಲಾಯಿತು.
ರೊ. ಉಪೇಂದ್ರ ವಾಗ್ಲೆ ಸ್ವಾಗಸಿದರು. ರೊ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಗಣೇಶ್ ಬರ್ಲಾಯ ಧನ್ಯವಾದವಿತ್ತರು.

Related posts

ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠಕ್ಕೆ ನೂತನ ಸಂಚಾಲಕರ ಆಯ್ಕೆ

Madhyama Bimba

ಜವಾಹರ ನವೋದಯ ವಿದ್ಯಾಲಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba

ಗಾಂಧೀ ಜಯಂತಿ ಅಂಗವಾಗಿ ಸನ್ಮಾನ ಹಾಗೂ ಅಭಿವೃದ್ಧಿಯ ಕೈಪಿಡಿ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More